ACTRESS NAYANTHARA: ಮದುವೆಯಾದ ಮೂರೇ ತಿಂಗಳಲ್ಲಿ ನಯನತಾರ 2 ಮಕ್ಕಳ ತಾಯಿ

ಮದುವೆಯಾದ ಮೂರು ತಿಂಗಳಿನಲ್ಲಿಯೇ ಬಹುಭಾಷಾ ನಟಿ ನಯನತಾರಾ ಮತ್ತು ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ದಂಪತಿಗೆ ಅವಳಿ ಮಕ್ಕಳು ಜನಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅವಳಿ ಮಕ್ಕಳ ತಾಯಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದೇನಪ್ಪಾ ಮೂರೇ ತಿಂಗಳಿಗೆ ಮಕ್ಕಳಾದ್ರಾ ಎಂಬ ಗೊಂದಲದಲ್ಲಿರುವವರಿಗೆ ಉತ್ತರ ನೀಡಿರುವ ನಯನತಾರ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್‌ ಅವರು ಉಯಿರ್‌ (ಉಸಿರು), ಉಲಗಮ್‌ (ಜಗತ್ತು) ಎಂದು ಮಕ್ಕಳನ್ನು ಹೆಸರಿಸಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ. ನಮ್ಮ ಆರಾಧನೆಯು ಫಲಗೊಂಡಿದ್ದು, ಹಿರಿಯರ ಆಶೀರ್ವಾದಿಂದ ಎಲ್ಲವೂ ಸಿಕ್ಕಿದರಿಂದ ಇದೀಗ ಮಕ್ಕಳು ಪಡೆಯಲು ಸಾಧ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

https://twitter.com/NayantharaU/status/1579095046946979841?s=20&t=ewIy5MagtKer8Zy0UP4hJQ

ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಕಳೆದ ಜೂನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಕೆಲವೇ ಗಣ್ಯರನ್ನು ಆಹ್ವಾನಿಸಿ ಮದುವೆ ಮಾಡಿಕೊಂಡಿದ್ದರು.

ಮದುವೆಗೆ ಮೊದಲೇ ಮಾರ್ಚ್‌ನಲ್ಲಿ ನಯನತಾರ ಜೋಡಿ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿಯು ತಮಿಳು ಸಿನಿಮಾ ರಂಗದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದು ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ.

#actress Nayantara #vignesh shivan #childrens #surrogate mother #within three months

More News