ACTRESS RAMYA STORY REVEALED: ರಿವೀಲ್ ಆಯ್ತು ರಮ್ಯಾ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕಥೆ

ಸ್ವಾತಿ ಮುತ್ತಿನ ಮಳೆ ಹನಿಯೇ ಸದ್ಯ ಭಾರೀ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿರೋ ಸಿನಿಮಾ. ಸ್ಯಾಂಡಲ್ ವುಡ್ ಕ್ವೀನ್ ಮತ್ತೇ ಕಂಬ್ಯಾಕ್ ಮಾಡ್ತಿರೋ ಮೊದಲ ಸಿನಿಮಾ ಎನ್ನುವ ಕಾರಣಕ್ಕೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಈ ಸಿನಿಮಾಗಾಗಿ ಕಾಯುತ್ತಿದೆ ಎಂದರೆ ತಪ್ಪಾಗಲಾರದು.
ಸ್ಯಾಂಡಲ್ ವುಡ್ ನ ಪದ್ಮಾವತಿ ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಎಂದು ಮಿಂದೇಳೋಕೆ ರಾಜ್ ಬಿ ಶೆಟ್ಟಿಯವರು ತಯಾರಿ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆ ಬೆನ್ನಲ್ಲೇ ಸಿನಿಮಾ ಕಥೆಯ ಎಳೆಯೊಂದು ಹೊರ ಬಿದ್ದಿದೆ.
ಸ್ವಾತಿ‌ ಎನ್ನುವಂತಹ ಒಂದು ಋತುವಿನಲ್ಲಿ ಬೀಳುವಂತಹ ಮಳೆ ಒಂದು ಕಪ್ಪೆ ಚಿಪ್ಪಿಗೆ ಬಿದ್ದರೆ ಅದು ಮುತ್ತಾಗುವ ಸಾಧ್ಯತೆ ಇರುತ್ತೆ. ಈ ಸಿನಿಮಾ ಕೂಡ ಬದಲಾವಣೆ ಬಯಸುತ್ತೆ. ಕಾವ್ಯದ ರೀತಿ ಸಿನಿಮಾ ಕೊಂಡೊಯ್ಯೋ ಪ್ಲ್ಯಾನ್ ಮಾಡಲಾಗುತ್ತಿದೆ. ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

ಅವರ ಕಥೆಯಲ್ಲಿ ಬೇರೆ ಬೇರೆ ಪಾತ್ರಗಳು ಸಣ್ಣ ಸಣ್ಣ ಭಾಗವಾಗಿ ಬರಲಿದೆ. ಆ ಭಾಗಗಳು ಬಂದ ಕಾರಣದಿಂದ ರಮ್ಯಾ ಜೀವನದಲ್ಲಿ ಏನಾಗುತ್ತೆ. ಬೇರೆಯವರ ಜೀವನದಲ್ಲಿ ಏನೆಲ್ಲಾ ಬದಲಾವಣೆ, ಪರಿಣಾಮ ಆಗುತ್ತೆ ಅನ್ನೋದೇ ಸಿನಿಮಾ ಕಥೆ ಎನ್ನಲಾಗಿದೆ.
ಇನ್ನೂ ಒಂದು ಮೊಟ್ಟೆಯ ಕಥೆ ಸಿನಿಮಾದ ನಟ ರಾಜ್ ಬಿ ಶೆಟ್ಟಿಯ ಕಥೆ ಮತ್ತು ನಟಿ ರಮ್ಯಾ ರ ನಿರ್ಮಾಣದ ಮೊದಲ ಸಿನಿಮಾ ಇದಾಗಿರೋದ್ರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಸಾಮಾನ್ಯವಾಗಿ ಹೆಚ್ಚಿದೆ. ಈ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟ, ರಮ್ಯಾ ಬಹಳ ಒಳ್ಳೆ ಸ್ವಭಾವದವರು. ಸಿನಿಮಾದಲ್ಲಿ ಅವರ ಇನ್ವಾಲ್ಮೆಂಟ್ ಇಲ್ಲ. ನಾನು ಎಂಬ ಎಲಿಮೆಂಟ್ ಇಲ್ಲ ಅವರಿಗೆ.

ಸಿನಿಮಾಗೆ ಹೇಗೆ ಜೀವ ತುಂಬಹುದು, ಒಳ್ಳೆ ಸಿನಿಮಾ ಹೇಗೆ ಮಾಡಬಹುದು‌ ಎಂದಷ್ಟೇ ಅವರ ಯೋಚನೆ ಇದೆ. ಸಿನಿಮಾ ಚಂದ ಮೂಡಿ ಬಂದರೆ ಎಲ್ಲರೂ ಚಂದವಾಗಿ ಕಾಣುತ್ತಾರೆ ಎಂಬುದನ್ನ ಅರಿತ ನಟಿ, ನಿರ್ಮಾಪಕಿ ಅವರು. ರಮ್ಯಾರನ್ನು ಭೇಟಿಯಾಗಿ ಕಥೆ ಹೇಳಿದೆ. ಕಥೆಯನ್ನು ಮೆಚ್ಚಿ ನಿರ್ಮಾಣಕ್ಕೆ ಮುಂದಾದರು ಎಂದರು.
ಮುಂದುವರೆದು ಸಿನಿಮಾ ಬಗ್ಗೆ ಮಾಹಿತಿ ನೀಡಿದ ಅವರು, ಹಂಸಲೇಖ ಅವರ ಯಾವುದೇ ಹಾಡನ್ನು ಕೇಳುವಾಗ ನಮಗೆ ಗೊತ್ತಿಲ್ಲದೇ ಒಳಗೆ ರೊಮ್ಯಾಂಟಿಕ್ ಆಗ್ತೆವೆ. ಸ್ವಲ್ಪ ಖುಷಿ ತರುತ್ತೆ. ಯಾವುದೋ ನೆಮ್ಮದಿಗೆ ನಮ್ಮನ್ನ ಕರೆದೊಯ್ತುತ್ತೆ. ನನಗೆ ಈ ಸಿನಿಮಾ ಒಂದು ಕಾವ್ಯದ ರೀತಿ ಮೂಡಿಬರಬೇಕು ಎಂಬ ಆಸೆ ಇದೆ. ಸಿನಿಮಾ ಬರವಣಿಗೆ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಮಾಡಲು ಸಿದ್ದತೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

#RAMYA #DIVYASPANDANA #SWATHI MUTHINA MALE HANIYE #KANNADA FILM #APPLE BOX STUDIOS

More News