ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹನ್ಸಿಕಾ ಮೋಟ್ವಾನಿ ಜೀವನದ ಬಹುಮುಖ್ಯ ಘಟ್ಟಕ್ಕೆ ಕಾಲಿಡಲಿದ್ದು, ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.
ಹಲವು ಭಾಷೆಗಳಲ್ಲಿ 50ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಹನ್ಸಿಕಾ. ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಈ ಕುರಿತು ಅನೇಕ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿದೆ. ಆದರೆ, ಅವರ ಮದುವೆಯ ಕುರಿತು ಇನ್ನೂ ಹನ್ಸಿಕಾ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ. ಅದರ ನಡುವೆಯೂ ಮದುವೆಯ ಸುದ್ದಿ ಎಲ್ಲೆಡೆ ಜೋರಾಗಿ ಹಬ್ಬಿದೆ.
ಮಾಹಿತಿಗಳ ಪ್ರಕಾರ ಮುಂದಿನ ಡಿಸೆಂಬರ್ ನಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸಿನಿಮಾಗಳ ಮೂಲಕವೇ ಮೋಡಿ ಮಾಡಿರುವ ನಟಿ ತೆರೆಮರೆಯಲ್ಲಿ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಶುರು ಮಾಡಿದ್ದಾರೆ. ಆ ಮೂಲಕ ತಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಯಾರ ಜೊತೆ ಮದುವೆ ?
ದಕ್ಷಿಣ ಭಾರತದ ಪ್ರಭಾವಿ ರಾಜಕೀಯ ನಾಯಕರೊಬ್ಬರ ಮಗನ ಜೊತೆ ವಿವಾಹಕ್ಕೆ ಸಿದ್ದತೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಕುಟುಂಬದವರೆಲ್ಲರೂ ಸೇರಿ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಇನ್ನೂ ಒಂದೆರಡು ತಿಂಗಳ ಅಂತರದಲ್ಲಿ ಮದುವೆ ನಡೆಯಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಜೈಪುರದ ಪುರಾತನ ಕೋಟೆಯೊಂದರಲ್ಲಿ ಈಗಾಗಲೇ ತಯಾರಿ ಆರಂಭ ಆಗಿದೆ. ವೈಭವದಿಂದ ಈ ವಿವಾಹ ನೆರವೇರಲಿದ್ದು, ಆಪ್ತರು ಮತ್ತು ಕುಟುಂಬದವರನ್ನು ಮಾತ್ರ ಆಹ್ವಾನಿಸಲಾಗುವುದು. ಈಗಾಗಲೇ ಅನೇಕ ರೂಮ್ಗಳನ್ನು ಅತಿಥಿಗಳಿಗಾಗಿ ಬುಕ್ ಮಾಡಲಾಗಿದೆ.
31 ವಯಸ್ಸಿನ ಹನ್ಸಿಕಾ ಮೋಟ್ವಾನಿ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಬಾಲನಟಿಯಾಗಿಯೇ ಅವರು ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಹೃತಿಕ್ ರೋಷನ್ ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ಅವರು ನಟಿಸಿ, ಗಮನ ಸೆಳೆದಿದ್ದರು. ಬಳಿಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ಬಳಿಕ ಹಲವಾರು ಭಾಷೆಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.
ಆದರೆ ಹನ್ಸಿಕಾ ಅವರು ತಾವು ಮದುವೆಯಾಗುತ್ತಿರುವ ವರನ ಹೆಸರನ್ನು ಮಾತ್ರ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಹೆಸರನ್ನು ಗೌಪ್ಯವಾಗಿಯೇ ಇಟ್ಟಿದ್ದಾರೆ.
#ACTRESS HANSIKA MOTWANI #GETTING MARRY #KOYI MIL GAYA #KANNADA #HINDI MOVIE #JAIPURA




