ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 9 ಗಂಟೆಗಳ ಕಾಲ ಸಿಬಿಐ ವಿಚಾರಣೆಗೆ ಹಾಜರಾದರು. ನಂತರ ಮಾತನಾಡಿದ ಅವರು ಆಪರೇಷನ್ ಕಮಲದ ಕುರಿತು ಅವರು ಗಂಭೀರ ಆರೋಪ ಮಾಡಿದರು,
ಆಮ್ ಆದ್ಮಿ ಪಕ್ಷವನ್ನು ಬಿಡುವಂತೆ ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹಾಕಿದ್ದರಲ್ಲದೆ, ದೆಹಲಿ ಸಿಎಂ ಕುರ್ಚಿಯ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣವು ದೆಹಲಿಯಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲ ಯಶಸ್ವಿಯಾಗಲು ನಡೆಸಿರುವ ಸಂಚು ಎಂದು ಸಿಸೋಡಿಯಾ ಕಿಡಿಕಾರಿದರು.
ಹತ್ತು ಸಾವಿರ ಕೋಟಿ ರೂಪಾಯಿ ಅಬಕಾರಿ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಿದೆ, ಆದರೆ, ತನಿಖಾ ಸಂಸ್ಥೆಯಾದ ಸಿಬಿಐ ಬಳಿ ಯಾವುದೇ ಮಾಹಿತಿ ಇಲ್ಲ, ಇದೊಂದು ನಕಲಿ ಪ್ರಕರಣ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ದೆಹಲಿ ಸಿಎಂ ಸ್ಥಾನ ಅಥವಾ ಜೈಲು ಶಿಕ್ಷೆ, ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂಬುದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ, ಎಎಪಿ ತೊರೆಯುವಂತೆ ನನ್ನ ಮೇಲೆ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂದು ಆರೋಪ ಮಾಡಿದರು.

ದೆಹಲಿಯಲ್ಲಿ ಜಾರಿಗೆ ತಂದಿರುವ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ. ಇದರಲ್ಲಿ ಭಾರೀ ಪ್ರಮಾಣದ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿ ಸಿಸೋಡಿಯಾ ಮತ್ತು 14 ಜನರ ವಿರುದ್ಧ ಕಳೆಜ ಅಗಸ್ಟ್ ನಲ್ಲಿ ಎಫ್ ಐಆರ್ ದಾಖಲಾಗಿತ್ತು.
#CBI ENQUIRY #DELHI DEPUTY CM #MANISH SISODIA # #DELHI EXCISE POLICY SCAM # delhi cm




