KIA Terminal 2: ಪ್ರಧಾನಿ ಮೋದಿ ಉದ್ಘಾಟಿಸಲಿರುವ ಕೆಐಎ ಟರ್ಮಿನಲ್‌..!

ಬೆಂಗಳೂರು: ನಾಡಿದ್ದು ಅಂದ್ರೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು, ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯದ ಅನುಭವ ನೀಡಲು, ‘ವಾಕ್‌ ಇನ್‌ ದಿ ಗಾರ್ಡನ್‌’ ಹೆಸರಿನ ಟರ್ಮಿನಲ್‌ 2ನ್ನು ನಿರ್ಮಿಸಲಾಗಿದೆ. ಟರ್ಮಿನಲ್ ನ ಆಯ್ದ ಫೋಟೋಗಳು

5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ‘ವಾಕ್‌ ಇನ್‌ ದಿ ಗಾರ್ಡನ್‌’
ಉದ್ಘಾಟನೆಯಿಂದ ಕೆಐಎ ಸ್ಥಾನಮಾನ ಜಾಗತಿಕವಾಗಿ ಹೆಚ್ಚಾಗಲಿದೆ
ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹಾಗೂ ಚೆಕ್-ಇನ್ ಮತ್ತು ವಲಸೆಗಾಗಿ ಕೌಂಟರ್‌ಗಳು ದ್ವಿಗುಣಗೊಳ್ಳುತ್ತವೆ
ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

#kia #kempegowda international airport #prime minister narendra modi #terminal 2 #walk in the garden #garden city #bengaluru #passengers den

More News