Pushpa-2 Shooting:ಬ್ಯಾಂಕಾಕ್ ನಲ್ಲಿ ಪುಷ್ಪ-2 ಶೂಟಿಂಗ್ ಗೆ ಸಿದ್ದತೆ..?

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆದ ಯಂಗ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯಿಸಿದ ಪುಷ್ಪ ಸಿನಿಮಾ ದೇಶದಾದ್ಯಂತ ಬಾರಿ ಸಂಚಲನ ಮೂಡಿಸಿತು. ಎಲ್ಲಿ ನೋಡಿದರೂ ಸಹ ಸಿನಿಮಾ ದ ಡೈಲಾಗ್ ಗಳದ್ದೇ ಹವಾ…

ತಗ್ಗೇದೇಲೇದು ಡೈಲಾಗ್ ಎಲ್ಲೆಡೆ ಸಖತ್ ಸದ್ದು ಮಾಡಿತ್ತು. ಸಿನಿಮಾ ಅಂತೂ ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದ ಬಾಕ್ಸ್ ಆಪೀಸ್ ನಲ್ಲಿ ಸದ್ದು ಮಾಡಿತು. ಇನ್ನೂ ಪುಷ್ಪ ಸಿನಿಮಾ ಆರಂಭದಿಂದಲೂ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಪೈಪೋಟಿ ಕೊಡುತ್ತಲೇ ದಾಖಲೆ ಮೀರಿ ಸಿನಿಮಾ ಓಡಿತು. ಆದುದರಿಂದ ಯಾವಾಗಲೂ ಪುಷ್ಪ 2 ಸಿನಿಮಾದ ಶೂಟಿಂಗ್ ಆರಂಭ ಮಾಡಿರಲಿಲ್ಲ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದ್ದು, ಶೀಘ್ರದಲ್ಲಿಯೇ ಶೂಟಿಂಗ್ ನಡೆಯಲಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿರುವ, ಸುಕುಮಾರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಸ್ಕ್ರಿಪ್ಟ್ ಎಲ್ಲವೂ ರೆಡಿಯಾಗಿತ್ತು. ಆದರೆ, ಕಾರಣಾಂತರದಿಂದಾಗಿ ಅದು ಮುಂದಕ್ಕೆ ಹೋಗಿರಲಿಲ್ಲ.
ಹೀಗಾಗಿ, ನಿರ್ದೇಶಕ ಸಿನಿಮಾದ ಸ್ಕ್ರಿಪ್ಟ್ ಅನ್ನು ಮತ್ತೆ ಮತ್ತೆ ಓದಿ ಅದನ್ನು ಇನ್ನಷ್ಟು ಹದ ಮಾಡಲು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ.

ಇದೀಗ ಹಲವಾರು ದಿನಗಳ ಬಳಿಕ ಸಿನಿಮಾ ನಿರ್ಮಾಣಕ್ಕೆ ಕಾಲ‌ಕೂಡಿ ಬಂದಿದೆ. ಅಂದ ಹಾಗೇ ಶೂಟಿಂಗ್ ಇಂಡಿಯಾದಲ್ಲಿ ನಡೆಯುತ್ತಿಲ್ಲ. ಟಾಲಿವುಡ್ ನಲ್ಲಿ ನಡೆಯುತ್ತಿರುವ ಚರ್ಚೆಗಳು ನೋಡಿದರೆ ಶೂಟಿಂಗ್ ಬ್ಯಾಂಕಾಕ್ ನಲ್ಲಿ ನಡೆಯುತ್ತದೆ ಎನ್ನಲಾಗುತ್ತಿದೆ.
ಸಿನಿಮಾ ಶೂಟಿಂಗ್ ಗಾಗಿ ಬ್ಯಾಂಕಾಕ್ ಹೋಗಲು ಚಿತ್ರ ತಂಡವು ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ. ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ, ಫಹಾದ್ ಫಾಸಿಲ್, ಹಾಸ್ಯ ನಟ ಸುನೀಲ್ ಸೇರಿದಂತೆ ಅನೇಕರು 40 ದಿನಗಳ ಕಾಲ ಬ್ಯಾಂಕಾಕ್ ನಗರದಲ್ಲಿ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದು ಬಾರಿ ಮೊತ್ತದ ಬಜೆಟ್ ಆಗಿದ್ದು, ಪುಷ್ಪ ಬಿಡುಗಡೆಯಾಗಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಇದೊಂದು ಸರ್ಪ್ರೈಸ್ ಕೊಡಲು ಚಿತ್ರ ತಂಡ ಮುಂದಾಗಿದೆ.

ಪುಷ್ಪ 2 ಸಿನಿಮಾದ ವಿಶೇಷ ಟೀಸರ್ ಬಿಡುಗಡೆ ಮಾಡಲು ಸಿನಿಮಾ ತಂಡ ಉತ್ಸುಕವಾಗಿದ್ದು, ಇತ್ತೀಚಿಗೆ ಅವತಾರ 2 ಸಿನಿಮಾದ ರಿಲೀಸ್ ವೇಳೆ ಪುಷ್ಪ 2 ವಿಶೇಷ ಟೀಸರ್ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಆದರೆ, ಇದೀಗ ದುಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ವರ್ಷವಿಡೀ ನಡೆಯಲಿದೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ‘ಪುಷ್ಪ 2’ ಸ್ಪೆಷಲ್ ಟೀಸರ್ ಅನ್ನು ‘ಅವತಾರ್ 2’ ಸಿನಿಮಾ ಪ್ರದರ್ಶನದ ವೇಳೆ ಬಿಡುಗಡೆ ಮಾಡಲಿದೆ ಅನ್ನೋ ಮಾತು ಕೇಳಿ ಬಂದಿತ್ತು. ಈಗ ವಿಶೇಷವಾದ ಟೀಸರ್ ಹಾಗೂ 40 ದಿನದ ದುಬಾರಿ ಶೂಟಿಂಗ್‌ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಮುಂದಿನ ವರ್ಷದ ಕ್ರಿಸ್ ಮಸ್ ಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

More News