RISHAB SHETTY’S BELL BOTTOM -2: ಬೆಲ್ ಬಾಟಮ್ 2 ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಆರಂಭ: ಜಯತೀರ್ಥ

ಬೆಲ್ ಬಾಟಂ 2 ಚಿತ್ರದ ಚಿತ್ರಕತೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ..
ಒಲವೇ ಮಂದಾರ ಎಂಬ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ 2007 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿರ್ದೇಶಕ ಜಯತೀರ್ಥ 2019 ರಲ್ಲಿ ಬೆಲ್ ಬಾಟಮ್ ಎಂಬ ಕ್ರೈಮ್ ಕಾಮಿಡಿ ಥ್ರಿಲ್ಲರ್ ಮೂವಿ ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಅದಾದ ಮೇಲೆ ಬೆಲ್ ಬಾಟಮ್ -2 ಚಿತ್ರ ತಯಾರಿಸಲು ಚಿತ್ರತಂಡ ನಿರ್ಧರಿಸಿತ್ತು‌. ಆದರೆ, ಇದುವರೆಗೂ ನಿರ್ಮಾಣ ಕಾರ್ಯ ಶುರುವಾಗಿಲ್ಲ.

ಟೋನಿ, ಎಂದೆಂದಿಗೂ, ಬುಲೆಟ್ ಬಸ್ಯಾ, ಬ್ಯೂಟಿಫುಲ್ ಮನಸುಗಳು ಹಾಗೂ ವೆನಿಲ್ಲಾ ಎಂಬ ಚಿತ್ರಗಳನ್ನು ನಿರ್ದೇಶಿಸಿದರು. ಆದರೆ, ಇದ್ಯಾವುದೂ ಅಷ್ಟು ಹಿಟ್ ಆಗಲಿಲ್ಲ. ಅದಾದ ಮೇಲೆ ಜಯತೀರ್ಥ ಅವರು ಬೆಲ್ ಬಾಟಮ್ ಅನ್ನು ಮಾಡಿದರು. ಇದರಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ನಾಯಕರಾಗಿ ಅಭಿನಯಿಸಿದ್ದರು. ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಸಖತ್ ಹಿಟ್ ಆಯ್ತು. ಅದಾದ ಮೇಲೆ ಇದರ ಇನ್ನೊಂದು ಭಾಗವನ್ನು ಚಿತ್ರೀಕರಣ ಮಾಡಲು ಮುಂದಾದರು. ಅದಕ್ಕೆ ಮುಹೂರ್ತ ಸಹ ಫಿಕ್ಸ್ ಮಾಡಲಾಗಿತ್ತು.

ಎರಡು ವರ್ಷಗಳು ಕಳೆದರೂ ಚಿತ್ರದ ಚಿತ್ರೀಕರಣದ ಕೆಲಸಗಳು ಮಾತ್ರ ಆರಂಭವಾಗಲಿಲ್ಲ. ಈ ಕುರಿತು ಕೆಲವರಲ್ಲಿ ಪ್ರಶ್ನೆಗಳೂ ಸಹ ಎದ್ದಿದ್ದವು.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಜಯತೀರ್ಥ ಅವರು, ಬೆಲ್ ಬಾಟಂ 2 ಚಿತ್ರದ ಚಿತ್ರಕತೆ ಸಿದ್ಧವಾಗಿದೆ. ಇದಕ್ಕೆ ಮುಹೂರ್ತ ಫಿಕ್ಸ್ ಮಾಡಿ ಎರಡು ವರ್ಷ ಆಯಿತು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಂದು ಶುಭ ಕೋರಿದ್ದರು. ಇನ್ನೂ ಇದು ಶೀಘ್ರದಲ್ಲಿಯೇ ಶುರುವಾಗಲಿದೆ ಎಂದಿದ್ದಾರೆ.

#DIRECTOR #JAYATHIRTHA #BELL BOTTOM 2 #RISHAB SHETTY #KANTARA #POWER STAR #PUNEET RAJKUMAR #TWO YEARS PENDING #CRIME #COMEDY #THRILLER

More News