Search

IND v BAN Series: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ: ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದ್ದು, ಕುಲ್ದೀಪ್‌ ಸೆನ್ ಹಾಗೂ ಆಲ್ರೌಂಡರ್ ಶಹಬಾಜ಼್ ಅಹ್ಮದ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಈ ಹಿಂದೆ ಯಶ್ ದಯಾಳ್ ಹಾಗೂ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನ ಆಲ್ ಇಂಡಿಯಾ ಸಿನಿಯರ್ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಯಶ್ ದಯಾಳ್ ತಂಡದಿಂದ ಹೊರಗುಳಿದರೆ, ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ಇವರಿಬ್ಬರನ್ನ ತಂಡದಿಂದ‌ ಕೈಬಿಟ್ಟಿರುವ ಆಯ್ಕೆ ಸಮಿತಿ, ಇವರ ಸ್ಥಾನಕ್ಕೆ ಕುಲ್ದೀಪ್‌ ಸೆನ್ ಹಾಗೂ ಶಹಬಾಜ಼್ ಅಹ್ಮದ್ ಅವರನ್ನ ಆಯ್ಕೆ ಮಾಡಿದೆ.

ಕುಲ್ದೀಪ್ ಸೆನ್ ಹಾಗೂ ಶಹಬಾಜ಼್ ಅಹ್ಮದ್ ಅವರನ್ನ ನ್ಯೂಜಿ಼ಲೆಂಡ್ ವಿರುದ್ಧ ನ.25ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಈ ಇಬ್ಬರು ಆಟಗಾರರನ್ನ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದ್ದು, ಪ್ರಸ್ತುತ ಕಿವೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಇವರ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರರನ್ನ ಆಯ್ಕೆ ಮಾಡಿಲ್ಲ.
ನ್ಯೂಜಿ಼ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ:
ಶಿಖರ್ ಧವನ್(ನಾಯಕ), ಶುಭ್ಮನ್‌ ಗಿಲ್, ದೀಪಕ್ ಹೂಡ,‌ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಸಂಜೂ ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್‌ ಥಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್‌ ಯಾದವ್, ಅರ್ಶದೀಪ್ ಸಿಂಗ್, ದೀಪಕ್‌ ಚಹರ್, ಉಮ್ರಾನ್ ಮಲ್ಲಿಕ್.
ಬಾಂಗ್ಲಾದೇಶ ವಿರುದ್ಧದ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮ(ನಾಯಕ), ಕೆಎಲ್. ರಾಹುಲ್,‌ ಶಿಖರ್‌ ಧವನ್, ವಿರಾಟ್ ಕೊಹ್ಲಿ, ರಜತ್‌ ಪಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್‌ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ಶಹಬಾಜ಼್ ಅಹ್ಮದ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್‌ ಥಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್‌ ಸೆನ್.

#TEAM INDIA #BANGALDESH #NEWZLAND #ONE DAY SERIES #ROHIT SHARMA #VIRAT KOHLI #K L RAHUL

More News

You cannot copy content of this page