ಮನುಷ್ಯರ ಮೆದುಳು ಎಷ್ಟೊಂದು ಶಕ್ತಿಶಾಲಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಎಲ್ಲ ತರಹದ ತಂತ್ರಜ್ಞಾನವನ್ನು ಮೀರಿದ ಮತ್ತು ತಂತ್ರಜ್ಞಾನಕ್ಕೆ ಪೋಷಕರಾಗಿರುವುದು ನಮ್ಮ ಮೆದುಳು. ಆದರೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿ ಮಾನವರ ಮೆದುಳಿಗೆ ಅಳವಡಿಸಲು ಸಾಧ್ಯವಾಗುವಂತಹ ರೋಬೋಟ್ ಚಿಪ್ ತಯಾರಿಸಲಾಗಿದೆ.

ನ್ಯೂರಾಲಿಂಕ್ ಕಂಪನಿಯು ತಯಾರಿಸಿರುವ ಚಿಪ್ ಅನ್ನು ಶೀಘ್ರದಲ್ಲಿಯೇ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಚಿಪ್ ಮನುಷ್ಯರ ಮೆದುಳಿಗೆ ಅಳವಡಿಕೆ ಮಾಡಿದರೆ ಅವರು ತನ್ನ ಆಲೋಚನಾ ಕ್ರಮಗಳಿಂದ ನೇರವಾಗಿ ಕಂಪ್ಯೂಟರ್ ಜೊತೆಗೆ ಸಂವಹನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಚಿಪ್ ಗೆ ಸಂಬಂಧಿಸಿದ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಲಾಗಿದೆ. ನಮಗೆ ಅವರಿಂದ ಅನುಮತಿ ಸಿಕ್ಕ ಕೂಡಲೇ ಮನುಷ್ಯರ ಮೆದುಳಿಗೆ ಮೊದಲ ಚಿಪ್ ಅಳವಡಿಕೆ ಕಾರ್ಯ ನಡೆಯಲಿದೆ. ಇದಕ್ಕೆ ಇನ್ನೂ 6 ತಿಂಗಳ ಕಾಲ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮನುಷ್ಯರಿಗೆ ಮೊದಲ ಬಾರಿಗೆ ಚಿಪ್ ಅಳವಡಿಕೆಯ ಪರೀಕ್ಷೆಯು 2020 ರಲ್ಲಿ ನಡೆಯುತ್ತದೆ ಎಂದು ನ್ಯೂರಾಲಿಂಕ್ 2019 ಜುಲೈನಲ್ಲಿ ಮಾಹಿತಿ ನೀಡಿದ್ದರು. ಸಧ್ಯಕ್ಕೆ ಪ್ರಾಣಿಗಳ ಮೆದುಳಿನಲ್ಲಿ ಚಿಪ್ ಅಳವಡಿಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ ಎನ್ನಲಾಗಿದೆ.
ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಅಲ್ಲದೆ, ಮನುಷ್ಯರು ಸಾಮರ್ಥ್ಯವನ್ನು ವೃದ್ದಿಸಿಕೊಂಡು ಸಕ್ರಿಯವಾದ ಮನುಷ್ಯರಾಗ್ತಾರೆ. ಅಷ್ಟಲ್ಲದೇ, ನರ ತುಂಡಾದರೂ ಸಹ ದೇಹವು ಶಕ್ತಿ ಕಳೆದುಕೊಳ್ಳದಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
#ELON MUSK #WORLD RICHEST PERSON #NEURALINK COMPANY #BRAIN CHIP #HIMSELF #HUMAN TRAIN #HIMSELF TRAIL #COMPUTER #FDA #DIRECT LINK TO BRAIN




