ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಹೆಸರುವಾಸಿಯಾಗಿರುವ, ಬಾಹುಬಲಿ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಖ್ಯಾತಿ ಪಡೆದಿರುವ ನಟ ಪ್ರಭಾಸ್ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನಲಾಗಿದ್ದು, ತಮ್ಮ ಆಸ್ತಿಯನ್ನು ಅಡಮಾನಿಟ್ಟ ಕೋಟ್ಯಾಂತರ ರೂ.ಗಳು ಸಾಲ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಾಮಾನ್ಯವಾಗಿ ಒಂದು ಸಿನಿಮಾಗೆ ಕೋಟ್ಯಾಂತರ ರೂ.ಗಳು ಸಂಭಾವನೆ ಪಡೆಯುತ್ತಾರೆ. ಅಲ್ಲದೆ, ಇದುವರೆಗೂ ಅವರು ನಟಿಸಿರುವ ಬಹುತೇಕ ಸಿನಿಮಾಗಳು ಬಾಕ್ಸಾಪೀಸ್ ನಲ್ಲಿ ದೂಳೆಬ್ಬಿಸಿದೆ. ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದಾರೆ. ಅದಕ್ಕಾಗಿಯೇ ಅನೇಕ ಸಿನಿಮಾಗಳಲ್ಲಿ ನಟಿಸುವ ಅವಕಾಶವು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೂ, ಅವರು ನಷ್ಟದಲ್ಲಿದ್ದಾರೆ ಎಂಬ ಮಾಹಿತಿಯು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಸಿನಿ ರಂಗದಲ್ಲಿ ಸಂಚಲವನ್ನು ಉಂಟು ಮಾಡಿದೆ.

ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಅವರ ಇಮೇಜ್ ಇನ್ನಷ್ಟು ಎತ್ತರಕ್ಕೆ ಏರಿತು. ಆ ನಂತರ ಅವರು ನಟಿಸಿದ ಅನೇಕ ಸಿನಿಮಾಗಳು ಟಾಲಿವುಡ್ ನಲ್ಲಿ ಸಂಚಲನವುಂಟು ಮಾಡಿ, ಬಾಕ್ಸಾಪೀಸ್ ನಲ್ಲಿ ಸಖತ್ ಕಲೆಕ್ಷನ್ ಸಹ ಮಾಡಿತು. ಸ್ಟಾರ್ ನಟರಾದ ಮೇಲೆ ಅವರು ಒಂದು ಸಿನಿಮಾಗೆ ಕನಿಷ್ಟ ನೂರು ಕೋಟಿ ರೂ.ಗಳು ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಬಾಹುಬಲಿ ನಂತರದಲ್ಲಿ ಅವರು ನಟಿಸಿದ ಎರಡು ಸಿನಿಮಾಗಳು ಬಾಕ್ಸಾಪೀಸ್ ನಲ್ಲಿ ಕೆಳಕ್ಕೆ ಜಾರಿದವು. ಅದಾದ ಮೇಲೆ ಇತ್ತೀಚಿಗೆ ನಟಿಸಿರುವಂತಹ ಆದಿಪುರುಷ್ ಸಿನಿಮಾ ಸಹ ಯಶಸ್ವಿಯಾಗುವ ನಿರೀಕ್ಷೆಯಿಲ್ಲ. ಇಂತಹ ಸಂದರ್ಭದಲ್ಲಿ ಅವರು ಕೋಟ್ಯಾಂತರ ರೂ,ಗಳು ಸಾಲ ಮಾಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ.

ಪ್ರಭಾಸ್ ನಟನೆಯ ಜೊತೆಗೆ ಒಬ್ಬ ಒಳ್ಳೆಯ ಬ್ಯುಸಿನೆಸ್ ಮೆನ್ ಆಗಿ ಕಾಣಿಸಿಕೊಂಡಿದ್ದು, ಯುವಿ ಕ್ರಿಯೇಶನ್ಸ್ ಸೇರಿದಂತೆ ಅನೇಕ ಉದ್ದಿಮೆಗಳ ಪಾಲುದಾರರೂ ಆಗಿದ್ದಾರೆ. ರಿಯಲ್ ಎಸ್ಟೇಟ್ ನಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಅನೇಕ ಪ್ರಾಪರ್ಟಿಗಳನ್ನು ಹೊಂದಿದ್ದಾರೆ ಎಂಬ ಮಾತುಗಳೂ ಇವೆ. ಅಲ್ಲದೆ, ದುಬೈನಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿದ್ದು, ಅಲ್ಲಿ ಒಂದು ಹೋಟೆಲ್ ಅನ್ನು ನಡೆಸುತ್ತಿದ್ದಾರೆ. ಅದರ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ಹಣ ವ್ಯಯಿಸಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಉದ್ಯಮಿಯಾಗಿರುವ ಹಿನ್ನೆಲೆಯಲ್ಲಿ ತೆರಿಗೆಯೂ ಅಧಿಕವಾಗಿ ಕಟ್ಟಬೇಕು. ಅದಕ್ಕಾಗಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ನಟ ಪ್ರಭಾಸ್ ಅವರು ಬ್ಯಾಂಕ್ ನಿಂದ ಲೋನ್ ಪಡೆದಿದ್ದಾರೆ ಎನ್ನಲಾಗಿದೆ.




