Diganth Birthday ; ದಿಗಂತ್ ಗೆ ಕ್ಯಾರೆಕ್ಟರ್ ಪೋಸ್ಟರ್ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ ಚಿತ್ರತಂಡ

ಬೆಂಗಳೂರು : ಡಿ.28; ಸ್ಯಾಂಡಲ್ ವುಡ್ ನಟ ದಿಗಂತ್ ಹುಟ್ಟಿದ ದಿನದ ಸಂಭ್ರಮದಲ್ಲಿದ್ದು, ಅವರಿಗೆ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ “ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರತಂಡ ವಿಶೇಷವಾಗಿ ಹಾಗೂ ಭಿನ್ನವಾಗಿ ಶುಭಾಷಯಗಳನ್ನು ಕೋರಿದೆ.

ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಸಮಂತ್ ಕಡ್ಕೊಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ದಿಗಂತ್ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ ಸಿನಿಮಾದಲ್ಲಿ ಜೋಡಿಯಾಗಿದ್ದ ನಿಧಿ ಸುಬ್ಬಯ್ಯ ಹಾಗೂ ದಿಗಂತ್ ಇದೀಗ ಈ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪಂಚರಂಗಿ ಸಿನಿಮಾದಲ್ಲಿ ಇಬ್ಬರಿಗೂ ಬಹಳಷ್ಟು ಹೆಸರು ತಂದಿಕೊಟ್ಟಿದೆ. ಇದೀಗ ಇಬ್ಬರು ಜೋಡಿಯಾಗಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ.

ಅತ್ಯಂತ ಸೌಮ್ಯ ಸ್ವಭಾವದ ನಟರಾಗಿರುವ ದಿಗಂತ್ ಗೆ ಸ್ಯಾಂಡಲ್ ವುಡ್ ನಲ್ಲಿ ರೊಮ್ಯಾಂಟಿಕ್ ಹೀರೋ ಅಥವಾ ಚಾಕೋಲೇಟ್ ಹೀರೋ ಅಂತ ಕರೆಯುತ್ತಿದ್ದರು. ಆದರೆ, ಇದೀಗ ಹೊಸ ಸಿನಿಮಾದಲ್ಲಿ ಇದೆಕ್ಕೆಲ್ಲಾ ತದ್ವಿರುದ್ಧವಾದ ಪಾತ್ರಗಳನ್ನು ನಿರ್ವಹಿಸಿದ್ದು, ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಹೊರಗಡೆಗೂ ಸಹ ಡಿಫ್ರೆಂಟ್ ಇಮೇಜ್ ನಲ್ಲಿ ಕಾಣಿಸಲಿದ್ದಾರೆ. ದಿಗಂತ್ ಅವರ ಹುಟ್ಟಿದ ದಿನವನ್ನು ಭಿನ್ನವಾಗಿ ಶುಭ ಕೋರಬೇಕೆಂದು ಟೀಂ ನಿರ್ಧಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಿನ್ನವಾದ ಕ್ಯಾರೆಕ್ಟರ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ನಿರ್ದೇಶಕ ಸಮರ್ಥ್ ಕಡಕೋಳ ತಿಳಿಸಿದ್ದಾರೆ.

ಪ್ರಸ್ತುತ ಸಿನಿಮಾ ಚಿತ್ರೀಕರಣವು ಮುಗಿಯುವ ಹಂತದಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಮುಗಿಯುವ ವಿಶ್ವಾಸವಿದೆ. ಕ್ರೈಂ ಸ್ಟೋರಿ ತರನೇ ಇರುವ ಈ ಸಿನಿಮಾದಲ್ಲಿ, ಸಸ್ಪೆನ್ಸ್ ಥ್ರಿಲ್ಲರ್ ವಿಷಯಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇದು ಹೆಸರಿಗೆ ತಕ್ಕಂತೆ ಮಾಡಿರುವ ಸಿನಿಮಾ ಆದ್ದರಿಂದ ಅದರ ಸುತ್ತಲೇ ಸಿನಿಮಾ ಮೂಡಿಬಂದಿದೆ. ದಿಗಂತ್ ಗೆ ಜೋಡಿಯಾಗಿ ಧನು ಹರ್ಷ ನಟಿಸಿದ್ದರೆ, ಜೊತೆಗೆ ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಇದಕ್ಕೆ ಕ್ಯಾಮೆರಾ ವರ್ಕ್ ಅನ್ನು ಅಭಿಮನ್ಯು ಸದಾನಂದ್ ಮಾಡಿದ್ದರೆ, ಶ್ರೀಪಾದ್ ಜೋಶಿ ಹಾಗೂ ರಾಹುಲ್ ವಿ ಪಾರ್ವತಿಕರ್ ಅವರು ಸಂಭಾಷಣೆ ಬರೆದಿದ್ದಾರೆ.

More News