ಬೆಂಗಳೂರು :ಡಿ.31; ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿ ಸಂಚಲನ ಮೂಡಿಸಿದ್ದ ನರೇಶ್ ಮತ್ತು ಪವಿತ್ರಾ ಅವರ ನಡುವಿನ ಸಂಬಂಧ ವಿಷಯ, ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿಯೇ ತಾವಿಬ್ಬರೂ ಮದುವೆಯಾಗಲಿದ್ದೇವೆ ಎಂಬ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ.
ಪವಿತ್ರಾ ಲೋಕೇಶ್ ಅವರು ನರೇಶ್ ಜೊತೆ ಕರ್ನಾಟಕ ಮೈಸೂರಿನ ಹೋಟೆಲ್ ರೂಮಿನಲ್ಲಿ ತಂಗಿದ್ದರು. ಆ ವೇಳೆ ಈ ದೃಶ್ಯಗಳು, ಸುದ್ದಿ ಭಾರೀ ವೈರಲ್ ಆಗಿತ್ತು. ಹೋಟೆಲ್ ಘಟನೆಯಿಂದಾಗಿ ಇವರಿಬ್ಬರ ಬಗ್ಗೆ ವಿವಿಧ ರೀತಿಯ ಸುದ್ದಿ, ಟ್ರೋಲ್ ಗಳು ಕ್ರಿಯೇಟ್ ಆದ್ವು. ಆದ್ದರಿಂದ ಪವಿತ್ರಾ ಲೋಕೇಶ್ ಅವರು ತಮ್ಮ ವಿರುದ್ಧ ಸುಳ್ಳು ಮತ್ತು ಅಶ್ಲೀಲ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಇಷ್ಟೆಲ್ಲಾ ಹೈಡ್ರಾಮ ನಡೆದು, ನರೇಶ್ ಹಾಗೂ ಪತ್ನಿ ರಮ್ಯಾ ಅವರ ಜೀವನದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದವು. ಇದೇ ಸಂದರ್ಭದಲ್ಲಿ ಪವಿತ್ರ ಮತ್ತು ನರೇಶ್ ನಡುವಿನ ನಂಟಿನ ಬಗ್ಗೆ ಸಹ ಚರ್ಚೆಗಳು ನಡೆದವು. ಇದೀಗ ಇವೆಲ್ಲಾ ಚರ್ಚೆಗಳಿಗೆ ಕೊನೆಗಾಣಿಸಲು ಮುಂದಾಗಿರುವ ಇಬ್ಬರೂ ಮದುವೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಇಬ್ಬರೂ ಜಂಟಿಯಾಗಿ ಕೇಕ್ ಕತ್ತರಿಸಿ, ಚುಂಬನ ನೀಡುವ ಮೂಲಕ ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಎಲ್ಲೆಡೆ ಚರ್ಚೆಗಳು ಶುರುವಾಗಿದ್ದರೆ, ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ನರೇಶ್ ಮತ್ತು ಪವಿತ್ರ ಲೋಕೇಶ್ ನಟಿಸಿರುವ ಸಿನಿಮಾದ ಕುರಿತು ಪ್ರಚಾರದ ಸಂದರ್ಭದಲ್ಲಿ ಪವಿತ್ರ ಅವರ ಭುಜದ ಮೇಲೆ ಕೈ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಒಬ್ಬೊಬ್ಬರು ಒಂದೊಂದು ತರ ಮಾತನಾಡಿಕೊಳ್ಳಲು ಶುರು ಮಾಡಿದರು. ಇದೇ ಸಂದರ್ಭದಲ್ಲಿ ಇವರಿಬ್ಬರ ನಡುವೆ ಲವ್ವಿ ಡವ್ವಿ ಇದೆ ಅಂತ ಚರ್ಚೆಗಳು ನಡೆದವು. ಇದೀಗ ಎಲ್ಲದಕ್ಕೂ ತಿಲಾಂಜಲಿ ಇಟ್ಟಿದ್ದು, ಮದುವೆ ಆಗ್ತಾ ಇದಾರೆ.




