ಬೆಂಗಳೂರು :ಜ.03; ಇತ್ತೀಚೆಗೆ ನಟ ಶಾರುಖ್ ಖಾನ್ ನಟಿಸಿರುವ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕನಿ ಧರಿಸಿದ್ದ ಸಂಗತಿ ವಿವಾದಕ್ಕೀಡಾಗಿ ದೊಡ್ಡ ಮಟ್ಟದ ಚರ್ಚೆಗಳು ನಡೆದವು. ಈ ವಿವಾದವು ರಾಜಕೀಯಕ್ಕೂ ತಿರುಗಿತು. ಧರ್ಮಗಳ ನಡುವೆ ಚರ್ಚೆಗೆ ಎಡೆಮಾಡಿಕೊಟ್ಟಿತು.
ಇದೀಗ ಈ ವಿವಾದವು ಪಾಕಿಸ್ತಾನಕ್ಕೆ ಶಿಫ್ಟ್ ಆಗಿದ್ದು, ಬೇಷರಮ್ ಹಾಡಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಗಾಯಕರೊಬ್ಬರು ಈ ಸಂಬಂಧ ವಿಡಿಯೋವನ್ನು ಮಾಡಿ ಶೇರ್ ಮಾಡಿದ್ದಾರೆ. ಅಲ್ಲಿ ಅವರು ಇದು ನನ್ನದೇ ಹಾಡಿನ ಸಾಲುಗಳಿವೆ ಎಂದಿದ್ದಾರೆ. ಆ ಮೂಲಕ ಈ ಹಾಡನ್ನು ಕಾಫಿ ಮಾಡಿ, ಕೃತಿಚೌರ್ಯ ಮಾಡಿದ್ದಾರೆ ಎಂದಿದ್ದಾರೆ.
ಪಾಕಿಸ್ತಾನದ ಖ್ಯಾತ ಗಾಯಕರಾದ ಸಜ್ಜದ್ ಅಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಡಿ ಶೀರ್ಷಿಕೆಯಾಗಿ, ನಾನು ಹೊಸ ಸಿನಿಮಾದ ಹಾಡನ್ನು ಕೇಳಿದೆ. ಇದು ನಾನೇ 26 ವರ್ಷಗಳ ಹಿಂದೆ ಮಾಡಿದ ಅಬ್ ಕೆ ಹಮ್ ಬಿಚಾರೆ ಹಾಡಿನ ತರಹವೇ ಇದೆ. ಇದನ್ನು ಎಲ್ಲರೂ ಆನಂದಿಸಿ ಅಂತ ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಜ್ಜದ್ ಅಲಿ ಅವರು ಹಾಕಿರುವ ವಿಡಿಯೋ ಕಾಣಿಸಿಕೊಂಡ ಮೇಲೆ ನೆಟ್ಟಿಗರು ಭಾರತದ ಚಿತ್ರರಂಗವನ್ನು ಹಿಯ್ಯಾಳಿಸುವುದಕ್ಕೆ ಶುರು ಮಾಡಿದ್ದಾರೆ. ಭಾರತದವರು ಪಾಕಿಸ್ತಾನದ ಗಾಯಕರು ಹಾಡಿದ್ದನ್ನ ಕಾಫಿ ಮಾಡ್ತಾರೆ. ಆದರೆ, ಸೌಜನ್ಯಕ್ಕಾದರೂ ಕ್ರೆಡಿಟ್ ಕೊಡಬೇಕಂತ ಯೋಚನೆ ಸಹ ಬರಲ್ಲ. ಬಾಲಿವುಡ್ ನ ಹಲವಾರು ಸಿನಿಮಾಗಳ ಟ್ಯೂನ್ ಕಾಫಿ ಮಾಡಲಾಗಿದೆ. ಜಪಾನ್ ನ, ಪಾಕಿಸ್ತಾನದ ಹೊಸ ಅಥವಾ ಹಳೆಯ ಹಾಡುಗಳನ್ನು ಕಾಫು ಮಾಡಿದ್ದಾರೆ ಎಂದು 6 ದಿನಗಳ ಹಿಂದೆ ಅಪ್ಲೋಡ್ ಮಾಡಿರುವ ವಿಡಿಯೋ ದಲ್ಲಿ ಅವರು ಹೇಳಿದ್ದಾರೆ. ಇದೀಗ ಇದು ಚರ್ಚೆಗೆ ಗ್ರಾಸವಾಗಿದೆ.




