ಮುಂಬೈ: ಆಕ್ಸಿಡೆಂಟ್ ಆದ ಬಳಿಕ ಕ್ರಿಕೆಟರ್ ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಬೆಡ್ ನಿಂದಲೇ ತಮ್ಮ ಅಭಿಮಾನಿಗಳಿಗೆ ಮೊದಲ ಬಾರಿಗೆ ಟ್ವೀಟರ್ ನಲ್ಲಿ ಸಂದೇಶ ರವಾನಿಸಿದ್ದಾರೆ. ನನ್ನ ಕಷ್ಟಕಾಲದಲ್ಲಿ ನನಗೆ ಸಪೋರ್ಟ್ ಮಾಡಿದ ಹಾಗೂ ಪ್ರೋತ್ಸಾಹಿಸಿದ ನನ್ನ ಎಲ್ಲಾ ಅಭಿಮಾನಿಗಳು, ತಂಡದ ಸಹ ಆಟಗಾರರು, ವೈದ್ಯರು ಮತ್ತು ಫಿಸಿಯೋಗಳಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
ನಿಮ್ಮೆಲ್ಲರನ್ನೂ ಮೈದಾನದಲ್ಲಿ ನೋಡಲು ಎದುರು ನೋಡುತ್ತಿದ್ದೇನೆ. ನಿಮಗೆಲ್ಲಾ ಧನ್ಯವಾದಗಳು ನಿಮ್ಮ ಆಶೀರ್ವಾದ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಬೆಂಬಲ ಶುಭ ಹಾರೈಕೆಗಾಗಿ ನಾನು ವಿನಮ್ರ ಮತ್ತು ಕೃತಜ್ಞನಾಗಿದ್ದೇನೆ. ನನ್ನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ.

ಚೇತರಿಕೆಯ ಹಾದಿ ಪ್ರಾರಂಭವಾಗಿದೆ ಮತ್ತು ಮುಂಬರುವ ಸವಾಲು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದೇ ಇರಬಹುದು, ಆದರೆ ನನ್ನ ಅಪಘಾತದ ಸಮಯದಲ್ಲಿ ನನಗೆ ಸಹಾಯ ಮಾಡಿದ ಮತ್ತು ನಾನು ಸುರಕ್ಷಿತವಾಗಿ ಆಸ್ಪತ್ರೆ ಸೇರಲು ಸಹಾಯ ಮಾಡಿದ ಈ ಇಬ್ಬರು ವೀರರನ್ನು ನಾನು ಒಪ್ಪಿಕೊಳ್ಳಲೇಬೇಕು.

ರಜತ್ ಕುಮಾರ್ ಮತ್ತು ನಿಶು ಕುಮಾರ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಮತ್ತು ಋಣಿಯಾಗಿರುತ್ತೇನೆ ಎಂದು ಕ್ರಿಕೆಟರ್ ರಿಷಬ್ ಪಂತ್ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

2022 ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಡಿವೈಡರ್ ಗೆ ರಿಷಬ್ ಪಂತ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ಪಂತ್ ಗೆ ತೀವ್ರವಾದ ಪೆಟ್ಟಾಗಿತ್ತು. ಅವರ ದುಬಾರಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಅಪಘಾತದ ಬಳಿಕ ರಿಷಬ್ ರನ್ನು ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಯನ್ನು ಮುಂಬೈನಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲಿಂದಲೇ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
#RISHABHPANTH #CRICKETER #THANKS #BCCI #BLESSED #GREATFUL #HOSPITAL #JAISHAH




