Kedarnath Temple : ಏಪ್ರಿಲ್‌ 25ರಂದು ಶ್ರೀ ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ..!

ಉತ್ತರಾಖಂಡ:ಫೆ.18: ಏಪ್ರಿಲ್‌ 25ರಂದು ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ ಎಂದು ಶ್ರೀ ಬದ್ರಿನಾಥ ಮತ್ತು ಕೇದಾರನಾಥ ದೇವಸ್ಥಾನ ಸಮಿತಿ ಪ್ರಕಟಿಸಿದೆ. ಉಖ್ಖಿಮಠದಲ್ಲಿ ಓಂಕಾರೇಶ್ವರ ದೇಗುಲದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಿನಾಂಕ ಘೋಷಿಸಿದ್ದಾರೆ.

ಚಳಿಗಾಲದಲ್ಲಿ ಹಿಮ ಹೆಚ್ಚಾಗಿ ತುಂಬಿರುವ ಕಾರಣ ವರ್ಷದಲ್ಲಿ ಆರು ತಿಂಗಳು ಕೇದರನಾಥ ದೇಗುಲ ಸೇರಿದಂತೆ ವಿವಿಧ ದೇಗುಲಗಳು ಮುಚ್ಚಿರುತ್ತವೆ. ದೇಶದಲ್ಲಿರುವ ಹನ್ನೆರಡು ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀ ಕೇದಾರನಾಥ ದೇಗುಲದ ಕಪಾತ್‌ (ಬಾಗಿಲುಗಳನ್ನು) ತೆರೆಯುವ ದಿನಾಂಕವನ್ನು ಘೋಷಿಸಿದೆ.

ಇಂದು ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಬದ್ರಿನಾಥ-ಕೇದಾರನಾಥ ದೇಗುಲ ಸಮಿತಿ (ಬಿಕೆಟಿಸಿ)ಯು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದೇಗುಲವನ್ನು ಹೂಗಳಿಂದ ಅಲಂಕರಿಸಿ ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಲಾಯಿತು.

ಈ ವರ್ಷ ಏಪ್ರಿಲ್‌ 25ರಂದು ಶ್ರೀ ಕೇದರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಸಂಪ್ರದಾಯದಂತೆ ಪ್ರತಿ ವರ್ಷ ಮಹಾ ಶಿವರಾತ್ರಿಯ ದಿನದಂದು ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಚಳಿಗಾಲದಲ್ಲಿ ಕೇದರನಾಥ ದೇಗುಲಕ್ಕೆ ಬಾಗಿಲು ಹಾಕಲಾಗಿರುತ್ತದೆ. ಈ ಸಮಯದಲ್ಲಿ ಓಂಕಾರೇಶ್ವರ ದೇಗುಲದಲ್ಲಿ ಕೇದರನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ.

More News