INQUIRY AGAINST SINDHURI AND ROOPA: IAS ಅಧಿಕಾರ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ ಡಿ. ರೂಪ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಬೆಂಗಳೂರು: IAS ಅಧಿಕಾರ ರೋಹಿಣಿ ಸಿಂಧೂರಿ ಮತ್ತು IPS ಅಧಿಕಾರಿ ಡಿ. ರೂಪ ಅವರ ವಿವಾದವನ್ನು ರಾಜ್ಯ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಇಬ್ಬರು ಅಧಿಕಾರ ವಿರುದ್ದ ಇಲಾಖಾ ವಿಚಾರಣೆ ಮುಖ್ಯ ಕಾರ್ಯದರ್ಶಿ ಅವರು ಆದೇಶ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮುಖ್ಯಕಾರ್ಯದರ್ಶಿಯವರು ಈ ಅದೇಶ ಮಾಡಿದ್ದಾರೆ.


ಡಿ.ರೂಪ ಅವರು ಮಾಧ್ಯಮ ಮುಂದೆ ನೀಡಿರುವ ಬಹಿರಂಗ ಹೇಳಿಕೆ, ಸಾಮಾಜಿಕ‌ ಜಾಲತಾಣದಲ್ಲಿ ಪೋಟೋ ಪ್ರಕಟಿಸಿರುವುದರಿಂದ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದನ್ನು ತನಿಖೆಗೆ ಒಳಪಡಿಸಲಾಗಿದೆ.
ರೋಹಿಣಿ ಸಿಂಧೂರಿ ವಿರುದ್ದ ಈಜುಕೊಳ ನಿರ್ಮಾಣ, ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ, ಬ್ಯಾಗ್ ಖರೀದಿ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳು ಇಲಾಖಾ ತನಿಖಾ ವ್ಯಾಪ್ತಿಗೆ ಒಳಪಟ್ಟಿದೆ.

ಇಬ್ಬರೂ ಅಧಿಕಾರಿಗಳು ಸಿವಿಲ್‌ ಸೇವಾ ನಿಯಮಾವಳಿಗಳನ್ನು ಉಲ್ಲಂಘನೆಯಾಗಿದ್ದರಿಂದ ತನಿಖೆಗೆ ಆದೇಶ ನೀಡಲಾಗಿದೆ.

More News