RASHMIKA MANDANNA TROLL: ಮತ್ತೆ ಟ್ರೋಲ್ ಗೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ: ತಮಗೆ ಹಿಡಿಸೋ ಡ್ರೆಸ್ ಹಾಕಿದ್ದೇ ತಪ್ಪಾ..!?

ಸೆಲಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಏನ್ ಹಾಕ್ತಾರೆ ಅಂತ ಕಾಯುವ ಟ್ರೋಲಿಗರು ಅಧಿಕ. ಅನೇಕ ಸಂದರ್ಭಗಳಲ್ಲಿ ಜನರು ಸೆಲಬ್ರೆಟಿಗಳನ್ನು ಹೊಗಳುವ ಮೂಲಕ ಮೇಲಕ್ಕೇರಿಸಿದರೆ, ಇನ್ನೊಂದು ಟೈಂ ನಲ್ಲಿ ಟ್ರೋಲ್ ಮಾಡುವ ಮೂಲಕ ಹೀಯಾಳಿಸುವುದು ವಾಡಿಕೆ. ಅದರಲ್ಲಿಯೂ ಬಟ್ಟೆಗಳ ವಿಚಾರದಲ್ಲಿ ಅಂತೂ ಹೆಚ್ಚು ಕಡಿಮೆ ಟ್ರೋಲ್ ಗೆ ಒಳಗಾಗುವುದು ಅಧಿಕ. ಅದೇ ತರ ಇದೀಗ ನಟಿ ರಶ್ಮಿಕಾ ಮಂದಣ್ಣ ಸಹ ಟ್ರೋಲ್ ಗೆ ಆಹಾರವಾಗಿದ್ದಾರೆ.

ಇತ್ತೀಚಿಗೆ ನಟಿ ರಶ್ಮಿಕಾ ಅವರು ಜೀ ಸಿನಿ ಅವಾರ್ಡ್ಸ್ ಸಮಾರಂಭಕ್ಕೆ ಶಾರ್ಟ್ ಡ್ರೆಸ್‌ನಲ್ಲಿ ಬಂದಿದ್ದರು. ಆಕೆಯು ಲಾಂಗ್‌ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್‌ ಹಾಕಿಕೊಂಡು, ಅದಕ್ಕೆ ಸೆಟ್ ಆಗುವ ಹಾಗೇ ಹೈ ಹೀಲ್ಡ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸಧ್ಯಕ್ಕೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಟ್ರೋಲ್ ಮಾಡಲು ನೆಟ್ಟಿಗರಿಗೆ ಆಹಾರವಾಗಿ ಸಿಕ್ಕಾಕಿಕೊಂಡಿದ್ದಾರೆ. ಇವರ ಫೋಟೋಗಳಿಗೆ ನೆಟ್ಟಿಗರು ಹಾಟ್ ಹಾಟ್ ಆಗಿ ಕಾಮೆಂಟ್ ಸಹ ಮಾಡ್ತಾ ಇದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ರಶ್ಮಿಕಾ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೆತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ಅದೂ ಹಾಗೆಯೇ ಮುಂದುವರಿದು ಯಶಸ್ಸಿನ ಕುದಿರೆ ಏರಿ ಸಾಗುತ್ತಲೇ ಇದ್ದಾರೆ.

ಸಧ್ಯಕ್ಕೆ ಟ್ರೋಲ್‌ ಗೆ ಗುರಿಯಾಗಿರುವ ರಶ್ಮಿಕಾ ರನ್ನು ಅನೇಕರು ಟೀಕಿಸುತ್ತಿದ್ದರೆ, ಮಂದಣ್ಣ ಅಭಿಮಾನಿಗಳು ಲೈಕ್ ಮಾಡ್ತಿ, ಹಾಟ್ ಹಾಟ್ ಆಗಿ ಕಾಣ್ತಿದ್ದೀರಿ ಎಂದು ಕಮೆಂಟಿಸಿದ್ರೆ, ಇನ್ನೂ ಕೆಲವರಂತೂ ರಶ್ಮಿಕಾ ಉರ್ಫಿ ಜಾವೇದ್‌ನ ಫಾಲೋ ಮಾಡ್ತಿದ್ದಾರಾ? ಆಕೆ ಹೀಗೆಲ್ಲಾ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಇಂತಹವರಿಂದ ಸಮಾಜಕ್ಕೆ ಏನ್ ಸಂದೇಶ ಕೊಡ್ತಾರೆ. ಇವರನ್ನು ಮೊದಲು ಸಿನಿಮಾ ಕ್ಷೇತ್ರದಿಂದ ಬಾಯ್ಕಾಟ್ ಮಾಡಬೇಕು. ಹೀಗೆಲ್ಲಾ ತೋರಿಸಿಕೊಳ್ಳುವ ಅಗತ್ಯ ಏನಿತ್ತು ಇವರಿಗೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಉರ್ಫಿ 2.0 ಎಂದು ಬರೆದಿದ್ದಾರೆ.

More News