NITYANANDA’S KAILASA COUNTRY: ನಿತ್ಯಾನಂದನ ಕೈಲಾಸ ಹಿಂದೂಧರ್ಮದ ಸಾರ್ವಭೌಮ ರಾಜ್ಯ: ವಿಶ್ವಸಂಸ್ಥೆಯಲ್ಲಿ ಆತನ ಶಿಷ್ಯೆಯ ಘೋಷಣೆ

ಅತ್ಯಾಚಾರ ಆರೋಪದಡಿಯಲ್ಲಿ ಬಂಧಿತರಾಗಿ ನಂತರ ಪರಾರಿಯಾಗಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿರ್ಮಿಸಿರುವಂತಹ ಕೈಲಾಸ ದೇಶವನ್ನು ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ ಎಂದು ಇತ್ತೀಚಿಗೆ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾ ಸಭೆಯಲ್ಲಿ ನಿತ್ಯಾನಂದ ಶಿಷ್ಯೆಯೊಬ್ಬರು ಘೋಷಿಸಿದ್ದಾರೆ.

ಈ ಸಂಬಂಧ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಶ್ವಸಂಸ್ಥೆಯ ವತಿಯಿಂದ ಆಯೋಜನೆ ಮಾಡುವ ಮಹತ್ವದ ಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮತ್ತಿತರ ಕಡೆಗಳಿಂದ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡು ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಬಗ್ಗೆ ಚರ್ಚೆಗಳನ್ನು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಭೆಯಲ್ಲಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎನ್ನಲಾದ ವಿಜಯಪ್ರಿಯಾ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಭಾರತ ದೇಶದಲ್ಲಿ ಹಿಂಸೆಗೆ ಒಳಗಾದ ಹಿನ್ನೆಲೆಯಲ್ಲಿ ನಿತ್ಯಾನಂದ ಹೊರ ಹೋಗಿದ್ದಾರೆ. ಇಲ್ಲಿ ಹಿಂದೂಗಳು ಸಹ ಹಿಂಸೆಗೆ ಒಳಗಾಗುತ್ತಿದ್ದು, ಅವರಿಗೆಲ್ಲಾ ರಕ್ಷಣೆ ಕೊಡಬೇಕು ಹಾಗೂ ಹಿಂದೂ ಧರ್ಮದ ಮಠಾಧೀಶರಿಗೆ ರಕ್ಷಣೆ ಕಲ್ಪಿಸಬೇಕಾಗಿದೆ ಎಂದು ಈ ಸಮ್ಮೇಳನದಲ್ಲಿ ಒತ್ತಾಯಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ (ಸುಪ್ರೀಂ ಪಾಂಟಿಫ್ ಆಫ್ ಹಿಂದೂಯಿಸಂ) ಅನ್ನು ನಿರ್ಮಿಸಿದ್ದಾರೆ. ಇಲ್ಲಿ ಹಿಂದೂ ನಾಗರೀಕರಿಗೆ ಹಾಗೂ ಆದಿಶೈವ, ಬುಡಕಟ್ಟು ಜನರು ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಸಂಪ್ರದಾಯಗಳನ್ನು ಪುನರುಜ್ಜೀವನ ಮಾಡಿದ್ದಾರೆ. ಕೈಲಾಸ ಸುಸ್ಥಿರ ಅಭಿವೃದ್ಧಿ ಮಾದರಿಯಲ್ಲಿ ಯಶಸ್ವಿಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

#NITYANANDA #SEPARATE COUNTRY #KAILASA #UNITED STATES OF KAILASA #SUPREEME POINT OF HUNDUISM #NITYANANDA FOLLOWER

More News