ಮುಂಬೈ: 2017ರ ಅಗಸ್ಟ್ ನಲ್ಲಿ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಒಟ್ಟು ಆಸ್ತಿ 7,500 ಕೋಟಿ ರೂಪಾಯಿ ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿದೆ, ಇದು ಭಾರತ ದೇಶದಲ್ಲಿ ನಾನಾ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲ ತೀರಿಸುವಷ್ಟು ಹಣ ಅವರ ಬಳಿ ಇದೆ ಎಂದು ಸಿಬಿಐ ತಿಳಿಸಿದೆ.

ವಿಜಯ ಮಲ್ಯ ಅವರ ಕಿಂಗ್ ಫಿಷರ್ ಏರ್ ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೂರನೇ ಪೂರಕ ಜಾರ್ಜ್ ಶೀಟ್ ನಲ್ಲಿ ತಿಳಿಸಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ನಗದು ಕೊರತೆಯನ್ನು ಎದುರಿಸುತ್ತಿದ್ದಾಗ ವಿಜಯ ಮಲ್ಯ ಅವರು ಪ್ರಾನ್ಸ್ ಮತ್ತು ಇಂಗ್ಲೇಂಡ್ ನಲ್ಲಿ 2015 ರಿಂದ 2016ರಲ್ಲಿ 330 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ವಿವರಿಸಿದೆ.

ವಿಜಯ ಮಲ್ಯ ಯುರೋಪಿನಲ್ಲಿ ಸಾಕಷ್ಟು ಆಸ್ತಿಯನ್ನು ಹೊಂದಿದ್ದಾರೆ ಹಾಗೆಯೇ ಭಾರತ ದೇಶದಲ್ಲಿ ನಾನಾ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿ ಮಾಡುವಷ್ಟು ಹಣ ಅವರ ಬಳಿಯಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿದೆ.




