Avinash Jadav: ಎಲೆಕ್ಷನ್ ಭರಾಟೆ: ಅವಿನಾಶ್ ಜಾದವ್ ಕಾರಿನ ಗ್ಲಾಸ್ ಪೀಸ್ ಪೀಸ್..!

ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದಿದೆ.

ಚಂದನಕೇರಾ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ ವೇಳೆ ಶಾಸಕ ಅವಿನಾಶ್ ಜಾಧವ್ ಕಾರು ಸೇರಿದಂತೆ ಆರು ಕಾರುಗಳು ಜಖಂ ಗೊಂಡಿವೆ. ಇನ್ನು ದಾಳಿ ವೇಳೆ, ಶಾಸಕ ಡಾ. ಅವಿನಾಶ್ ಜಾದವ್ ಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಶಾಸಕ ಅವಿನಾಶ್ ಜೊತೆಗೆ ಇದ್ದ ಬೆಂಬಲಿಗರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅವರು ತಂದಿದ್ದ ಕಾರುಗಳ ಗ್ಲಾಸ್ ಪುಡಿಪುಡಿ ಆಗಿವೆ.

ಇನ್ನು ಶಾಸಕ‌ ಅವಿನಾಶ್ ಜಾಧವ್ ಮೇಲೆ ಕಲ್ಲು ತೂರಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರು ಮಾಡಿರುವುದಾಗಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾದವ್ ಆರೋಪಿಸಿದ್ದು,
ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

More News