Uday Garudachar Wife: ಚಿನ್ನ ಚಿನ್ನ..! ಉದಯ್ ಗರುಡಾಚಾರ್ ಪತ್ನಿ ಬಳಿ ಇದೆ 22 ಕೆಜಿ ಚಿನ್ನ‌‌!

ಬಿಜೆಪಿ ಪಕ್ಷದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್
ಕೋಟಿ ಕೋಟಿ ರೂಪಾಯಿಗಳ ಒಡೆಯ. ನಾಮಪತ್ರ ಸಲ್ಲಿಸಿದ ಬಳಿಕ ಆಸ್ತಿ ದಾಖಲೆಯ ಅಫಿಡವಿಟ್ ಸಲ್ಲುಸಿದ್ದು, ಉದಯ್ ಗರುಡಾಚಾರ್ಯ ರ ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂಪಾಯಿ ಆಗಿದೆ. ಅಷ್ಟೇ ಅಲ್ಲ, ಉದಯ್ ಗರುಡಾಚಾರ್ ಪತ್ನಿ ಮೇದಿನಿ ಉದಯ್ ಬಳಿಯೇ ಚಿನ್ನ 22 ಕೆಜಿ ಅಂದರೆ 5.49 ಕೋಟಿ ಮೌಲ್ಯದ ಚಿನ್ನ ಇದೆ ಎಂಬ ವಿವರ ಲಭ್ಯವಾಗಿದೆ.

ಕುಬೇರ ಗರುಡಾಚಾರ್

ಉದಯ್ ಗರುಡಾಚಾರ್ಯ ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ಇದೆ. ಚರಾಸ್ತಿ 123.19 ಕೋಟಿ, ಸ್ಥಿರಾಸ್ತಿ 77.25 ಕೋಟಿ. ಅದರಲ್ಲಿ 47.63 ಕೋಟಿ ಸಾಲ ಪಡೆದಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಇನ್ನು ಪತ್ನಿ ಮೇದಿನಿ ಉದಯ್ ಒಟ್ಟು ಆಸ್ತಿ ಮೌಲ್ಯ- 41.14 ಕೋಟಿ ಇದ್ದು, 97.65 ಲಕ್ಷ
ಸಾಲ ಇದ್ದು, ಬೆಳ್ಳಿ 188 ಕೆ.ಜಿ 1.42 ಕೋಟಿ ಮೌಲ್ಯದ್ದು ಇರುವ ಮಾಹಿತಿ ನೀಡಿದರು.

ಕೃಷಿ ಭೂಮಿಯಿಂದಲೇ ಕೋಟಿ ಕೋಟಿ ರೂ ಸಂಪಾದನೆ..!: ೩೦೦ ಕೋಟಿ ರೂಪಾಯಿ ಒಡೆಯ ಮುನಿರತ್ನ..!

ಕ್ಷೇತ್ರ ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ೩೦೦ ಕೋಟಿ ರೂಪಾಯಿ ಒಡೆಯರಾಗಿದ್ದಾರೆ.
ಕೃಷಿ ಭೂಮಿಗಳಿಂದಲೇ‌ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.
ಪತ್ನಿ ಹೆಸರಲ್ಲಿದೆ ೨೨ ಕೋಟಿ ಮೌಲ್ಯದ ಆಸ್ತಿ ಇದ್ದು, ಮುನಿರತ್ನರ ಒಟ್ಟು ಆಸ್ತಿ ಮೌಲ್ಯ
270,68 ಕೋಟಿ ರೂಪಾಯಿ‌ ಇದರಲ್ಲಿ ಚರಾಸ್ಥಿ 31.34 ಕೋಟಿ, ಸ್ಥಿರಾಸ್ತಿ – 239.29 ಕೋಟಿ ಇದ್ದು, 93.48 ಕೋಟಿ
ರೂಪಾಯಿ ಸಾಲ ಇರುವುದಾಗಿ ತಿಳಿಸಿದ್ದಾರೆ. ಇನ್ನು
ಮುನಿರತ್ನ ಪತ್ನಿ ಮಂಜುಳ ಅವ್ರ ಒಟ್ಟು ಆಸ್ತಿ 22.22 ಕೋಟಿ ಇದ್ದು, ಚರಾಸ್ತಿ- 1,66 ಕೋಟಿ.ಸ್ಥಿರಾಸ್ತಿ- 20.55 ಕೋಟಿ ಮತ್ತು ಸಾಲ- 8,73 ಕೋಟಿ ರೂ ಇದೆ.

More News