ಡಿಕೆ ಶಿವಕುಮಾರ್ ಮೇಲೆ ಇಡಿ, ಸಿಬಿಐ ಪ್ರಕರಣಗಳಿವೆ. ಈಗಲೇ ಸಿಎಂ ಸ್ಥಾನ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. 2024 ರ ಚುನಾವಣೆಯಲ್ಲಿ ಇದರಿಂದ ಪರಿಣಾಮ ಬೀರಬಹುದು ಎಂಬ ಹಿನ್ನೆಲೆ ಯಲ್ಲಿ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಮಿಸ್ ಆದವು ಎಂಬ ಚರ್ಚೆಯೊಂದು ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ.
2017ರಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿಕೆ ಶಿವಕುಮಾರ್ ನಿರಂತರ ತನಿಖೆಯನ್ನು ಎದುರಿಸುತ್ತಿದ್ದಾರೆ. 2017 ರಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಬೆನ್ನಲ್ಲೇ ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿತ್ತು. 2019ರ ಸೆಪ್ಟಂಬರ್‌ನಲ್ಲಿ ಸಿಬಿಐಗೆ ಅನುಮೋದನೆ ದೊರಕಿತ್ತು.

2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಡಿಕೆಶಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಒಮ್ಮೆ ಜೈಲಿಗೂ ಹೋಗಿ ಬಂದಿದ್ದಾರೆ. ವಿಚಾರಣೆ ಇನ್ನೂ ನಡೆಯುತ್ತಿರುವ ಕಾರಣ ಮತ್ತೇ ಸಂಕಷ್ಟ ಎದುರಾಗಲೂ ಬಹುದು. ಮುಖ್ಯಮಂತ್ರಿ ಯಾದಾಗ ಸಮಸ್ಯೆ ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಪೆಟ್ಟು ಬೀಳುವ ಸಾದ್ಯತೆ ಇರುವುದರಿಂದ ಮುಖ್ಯಮಂತ್ರಿ ಯನ್ನಾಗಿ ಸಿದ್ದರಾಮಯ್ಯ ರನ್ನು ಕೈ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗ್ತಿದೆ.
ಇತ್ತ ಡಿಕೆ ಶಿವಕುಮಾರ್ ಗೆ ನೀಡಿರುವ ಭರವಸೆಯಂತೇ
ಒಂದು ಡಿಸಿಎಂ ಹುದ್ದೆ ಸೃಷ್ಟಿಸಿ, ಕೇಳುವ 2 ಪ್ರಬಲ ಖಾತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಸೂಚನೆ ನೀಡಲಾಗಿದೆ. ನಂತರ ಅವರ ವಿಚಾರಣೆ ಪರಿಸ್ಥಿತಿ ನೋಡಿಕೊಂಡು 2025ರ ನವೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯರಿಂದ ಅಧಿಕಾರ ಹಸ್ತಾಂತರ ಜೊತೆಗೆ ಡಿಕೆ ಬೆಂಬಲಿಗರಿಗೆ ಸಚಿವಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಿದೆ.




