BJP MLA MUNIRATHNA DOING HONEYTRAP: ಮುನಿರತ್ನ ವಿರುದ್ಧ ಶಿಷ್ಯನಿಂದಲೇ ಹನಿಟ್ರ್ಯಾಪ್ ಆರೋಪ..!

ಬೆಂಗಳೂರು : ನಿಮ್ಮದು ಈಸ್ಟ್ ಮನ್ ಕಲರ್ ಪಿಕ್ಚರ್ ಇದೆ ಬಿಡಲಾ..? ಇಲ್ಲಾ.. ನಮ್ಮ ಪರ ಕೆಲಸ ಮಾಡ್ತೀಯಾ ಎಂದು ಬೆದರಿಕೆ ಹಾಕಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ಗುರುವಿನ ವಿರುದ್ಧವೇ ಶಿಷ್ಯ ವೇಲುನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆ ಆರ್ ಆರ್ ನಗರ ಕ್ಷೇತ್ರದಲ್ಲಿ ಆಪರೇಷನ್ ಹಸ್ತ ಮಾಡುವ ಮೂಲಕ ಶಾಸಕ ಮುನಿರತ್ನಗೆ ಡಿಕೆ ಬ್ರದರ್ಸ್ ಶಾಕ್ ನೀಡಿದ್ದಾರೆ. ಶಾಸಕ ಮುನಿರತ್ನ ಅತ್ಯಾಪ್ತ ಎಂದೇ ಗುರುತಿಸಿದ್ದ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ ಕೈ ಸೇರ್ಪಡೆಯಾದರು.‌

ಈ ವೇಳೆ ಮಾಜಿ ಸಚಿವರ ವಿರುದ್ಧವೇ ಗಂಭೀರ ಆರೋಪ ಮಾಡಿರುವ ಮುನಿರತ್ನ ಶಿಷ್ಯ ವೇಲುನಾಯ್ಕರ್, ಕಾರ್ಪೋರೇಟರ್ ಗಳನ್ನ ಮುನಿರತ್ನ ಹನಿಟ್ರ್ಯಾಪ್ ಹೆಸರಿನಲ್ಲಿ ಹೆದರಿಸ್ತಿದ್ರು ಎಂದು ಆರೋಪ ಮಾಡಿದ್ದಾರೆ. ಹನಿಟ್ರ್ಯಾಪ್ ಮಾಡೋಕೆಂದೇ ಸ್ಟುಡಿಯೋಗಳನ್ನ ಮಾಡಿಕೊಂಡಿದ್ರು: ಶಿಷ್ಯನ ಬಹಿರಂಗ ಆರೋಪ ಮಾಡಿದ್ದಾರೆ.

ಪಿಕ್ಚರ್ ಬಿಡ್ಬೇಕಾ ನಮ್ಮ ಜೊತೆ ಕೆಲಸ ಮಾಡ್ತೀಯಾ ಎಂದು ಆರ್.ಆರ್.ನಗರದ ಎಲ್ಲ ಕಾರ್ಪೋರೇಟರ್ ಗಳಿಗೆ ಹೆದರಿಸ್ತಿದ್ರು. ಇದಕ್ಕೆಂದೇ ಎರಡು ಸ್ಟುಡಿಯೋ ಮಾಡಿಕೊಂಡಿದ್ರು. ಹನಿಟ್ರ್ಯಾಪ್ ಮಾಡೋಕೆಂದೇ ಜೆಪಿ ಪಾರ್ಕ್, ವಿದ್ಯಾರಣ್ಯಪುರದಲ್ಲಿ ಸ್ಟುಡಿಯೋ ಮಾಡಿಕೊಂಡಿದ್ರು.
ಯಾರಾದ್ರೂ ಬರಲಿಲ್ಲ ಅಂದ್ರೆ ಹೆಣ್ಣುಮಕ್ಕಳ ಸಹವಾಸ ಮಾಡಿಸೋರು. ಅದನ್ನಿಟ್ಟುಕೊಂಡು ಕಾರ್ಪೋರೇಟರ್ ಗಳನ್ನ‌ ಹೆದರಿಸ್ತಿದ್ರು. ಮುನಿರತ್ನ ಅವರು ಸಚಿವರಾದಾಗ ಏನೂ ಕೆಲಸ ಮಾಡಲಿಲ್ಲ. ಅವರು ಮಾಡಿದ್ದು ಸಿನಿಮಾ ಪ್ರೊಡ್ಯೂಸರ್ ಕೆಲಸ ಮಾತ್ರ ಎಂದು ಗುರುವಿನ ವಿರುದ್ಧವೇ ಶಿಷ್ಯ ವೇಲುನಾಯ್ಕರ್ ಆರೋಪ ಮಾಡಿದ್ದಾರೆ.
ಬಿಬಿಎಂಪಿ ಚುನಾವಣೆ ಹಿನ್ನೆಲೆ.. ಆರ್ ಆರ್ ನಗರ ಕ್ಷೇತ್ರದಲ್ಲಿ ಆಪರೇಷನ್ ಹಸ್ತ
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಗೆ ಬಿಗ್ ಶಾಕ್ ನೀಡಿದ ಡಿಕೆ ಬ್ರದರ್ಸ್, ಶಾಸಕರ ಅತ್ಯಾಪ್ತ ಎಂದೇ ಗುರುತಿಸಿದ್ದ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ KGF ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೇಳಿದ್ದ ವೇಲು ನಾಯ್ಕರ್, ಇದಕ್ಕಾಗಿ ಶಾಸಕ ಮುನಿರತ್ನ ತಮ್ಮ ಶಿಷ್ಯನಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಯಶಸ್ಸು ಕಂಡಿರಲಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದಲೇ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದ ವೇಲು‌ ಕುಮಾರ್, ಇದೀಗ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದ್ದಾರೆ.

#DKSHIVAKUMAR #DCM #MP #DKSURESH #KUSUMA #RAJARAJESHWARI #MUNIRATHNA #VELUNAIKER #MOHANKUMAR #SRINIVASAMURTHY #CONGRESS #BJP #BBMPELECTION

More News