ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಎಲ್ಲ ತಾಲೂಕಗಳನ್ನ ಬರಗಾಲ ಎಂದು ಘೋಷಣೆ ಮಾಡಬೇಕು, ರಾಜ್ಯದ ಎಲ್ಲೆಡೆ ಬರಗಾಲ ಆವರಿಸಿದೆ.
ಈಗಾಗಲೇ ಸರಕಾರಕ್ಕೆ ಒತ್ತಾಯ ಮಾಡಿದ್ದೇನೆಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಂಗಾರು ಆರಂಭದಲ್ಲಿ ಮಳೆ ಆಗಲಿಲ್ಲ.
ಮೊದಲು ಸೆಟ್ಲಲೈಟ್ ನಲ್ಲಿ ಮಳೆ ಅಭಾವ ಕುರಿತು ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕಗಳನ್ನ ಸರಿಯಾಗಿ ಗುರುತು ಮಾಡಲಿಲ್ಲ. ರೇನ್ ಫಾಲ್ ನಲ್ಲಿ ಸರಿಯಾಗಿ ಗುರತು ಆಗದ ಕಾರಣ ಸಮಸ್ಯೆ ಆಯಿತು. ಇದರಿಂದಾಗಿ ಘೋಷಣೆಗೆ ಅಡ್ಡಿ ಆಯಿತು. ಈಗ ಮತ್ತೇ ಸಿಎಂ ಸಿದ್ದರಾಮಯ್ಯಾ ನವರೆಗೆ ಮನವಿ ಮಾಡಲಾಗಿದೆ ಎಂದರು.
ಇನ್ನು ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ, ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನನಗೆ ಇಲ್ಲ.
ನಮ್ಮ ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳತ್ತಾರೆ. ನಾನು ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರಲು ಮಾತ್ರ ಗಮನ ಹರಿಸುವೆ. ಮುನೇನಕೊಪ್ಪ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ರೆ ಮೋಸ್ಟ್ ವೆಲ್ ಕಮ್ ಎಂದರು.




