ELECTRICITY SHORTAGE IN STATE: ವಿದ್ಯುತ್ ಕೊರತೆಯಾಗಿದ್ದು ಅದನ್ನು ನೀಗಿಸಲು ವಿದ್ಯುತ್ ಖರೀದಿ ಮಾಡಲಾಗುವುದು: CM ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಮಳೆಯಿಲ್ಲ, ಬರಗಾಲ ಇದೆ ಆದ್ದರಿಂದ ತೊಂದರೆ ಆಗಿದೆ, 7 ಗಂಟೆ ವಿದ್ಯುತ್ ಕೋಡೋಕೆ ಆಗ್ತಾ ಇಲ್ಲ, ಆದ್ರೂ ವಿದ್ಯುತ್ ಕೊಡ್ತಾ ಇದ್ದೀವಿ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ನಿರಂತರ ವಿದ್ಯುತ್ ನೀಡುವ ಉದ್ದೇಶದಿಂದ ಅಧಿಕಾರಿಗಳ ಸಭೆ ನಡೆಸುವುದಕ್ಕಿಂತ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ವಿದ್ಯುತ್ ಕೊಡಬೇಕು ಎಂಬ ಆದೇಶ ಮಾಡಿದ್ದೀನಿ, ಖರೀದಿ ಮಾಡಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಉತ್ಪಾದನೆ ಕಡಿಮೆ ಆಗಿದೆ, ಬೇಡಿಕೆ ಜಾಸ್ತಿ ಇದೆ, ಮಳೆ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗಿದೆ, ಬೇಸಿಗೆ ತರ ವಿದ್ಯುತ್ ಬೇಡಿಕೆ ಜಾಸ್ತಿ ಆಗಿದೆ, ಕಳೆದ ವರ್ಷ ಈ ಸಮಯಕ್ಕೆ 900 ರಿಂದ 1000 ಸಾವಿರ ಮೆಗಾವ್ಯಾಟ್ ಬಳಕೆ ಆಗುತ್ತಿತ್ತು, ಈ ತಿಂಗಳಲ್ಲಿ 1500 ರಿಂದ 1600 ಮೆಗಾವ್ಯಾಟ್ ಬೇಡಿಕೆ ಇದೆ ಎಂದು ತಿಳಿಸಿದರು.
ಬೇಡಿಕೆ ಜಾಸ್ತಿಯಾಗಿದ್ದರಿಂದ ಸ್ಪಲ್ಪ ತೊಂದರೆ ಆಗಿದೆ, ಇವತ್ತು ನಡೆಯುವ ಸಭೆಯಲ್ಲಿ ಹೇಗೆ ವಿದ್ಯುತ್ ಅನ್ನು ಹೊರಗಡೆಯಿಂದ ಖರೀದಿ ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರು ಹೇಳೋದಕ್ಕೆ ಉತ್ತರ ಕೊಡೋಕೆ ಆಗಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಅವರು ರಾಜಕೀಯವಾಗಿ ಮಾತನಾಡುತ್ತಾರೆ, ಎಲ್ಲಾದ್ದನ್ನೂ ರಾಜೀಕಯ ದೃಷ್ಟಿಕೋನದಲ್ಲಿ ನೋಡುತ್ತಾರೆ ಎಂದು ಟೀಕಿಸಿದರು.,

More News