NO NEED FOR AN ANSWER WHO SPEAK ON THE ROAD: ಬಿಜೆಪಿ ಇರೋ ಕಡೆ ಐಟಿ ರೇಡ್ ನಡೆಯಲ್ಲ: ಬೇರೆ ಕಡೆಗಳಲ್ಲಿ ಆಗುತ್ತಿದೆ ಯಾಕೆ ಎಂದು ಪ್ರಶ್ನಿಸಿದ ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : ಐಟಿ ರೇಡ್ ನಡೆಯೋದೆ ರಾಜಕೀಯ ಉದ್ದೇಶಕ್ಕೆ, ಬಿಜೆಪಿ ಇರೋ ಕಡೆ ಐಟಿ ರೇಡ್ ಆಗಲ್ಲ, ಬೇರೆ ಕಡೆಗಳಲ್ಲಿ ಆಗುತ್ತೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೊಟ್ಟು ಮಾಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ, ಪಡೆದುಕೊಂಡು, ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರಲ್ಲದೆ, ಬಿಜೆಪಿಯವರು ಇರೋ ಕಡೆ IT ರೈಡ್ ಏಕೆ ನಡೆಯಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮಾಡಿರುವ ರಾಜ್ಯ ಕಲೆಕ್ಷನ್ ಸೆಂಟರ್ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಿ, ಯಾರಿಗೆ ಆಯ್ತೋ ನನಗೆ ಗೊತ್ತಿಲ್ಲ, ರಸ್ತೆ, ಬೀದಿಯಲ್ಲಿ ಮಾತಾಡೋರಿಗೆಲ್ಲಾ ಉತ್ತರ ಕೊಡೊ ಅವಶ್ಯಕತೆ ಇಲ್ಲ ಎಂದು ಅಶ್ವಥ್ ನಾರಾಯಣ್ ಆರೋಪಕ್ಕೆ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.
ಶೇಕಡಾ 70ರಷ್ಟು ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿದೆ
ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಕೆಂಪಣ್ಣ ಅವರು ಹೇಳಿರುವಂತೆ ನಾವು ಆದ್ಯತೆ ಮೇರೆಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಕಾಮಗಾರಿಗಳ ತನಿಖೆ ನಡಿತಾ ಇದ್ರೂ ಕೂಡ ಕೆಂಪಣ್ಣ ಹೇಳಿದ್ರು ಅಂತ ಹಣ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ಶೇಕಡಾ 60 ರಿಂದ 70% ಅಷ್ಟು ಹಣ ಬಿಡುಗಡೆ ಮಾಡಿದ್ದೇವೆ, ಕೆಂಪಣ್ಣ ಯಾವುದೇ ಗಾಬರಿ ಪಡುವ ಅಗತ್ಯ ಇಲ್ಲ. ಏನಾದ್ರು ಇದ್ರೆ ಬಂದು ಭೇಟಿ ಮಾಡಿ ಮಾತುಕತೆ ಮಾಡಲಿ ಎಂದು ತಾಕೀತು ಮಾಡಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್
ರಾಜ್ಯದಲ್ಲಿ ತಲೆದೋರಿರುವ ಲೋಡ್ ಶೆಡ್ಡಿಂಗ್ ಸಂಬಂಧ ಮಾತನಾಡಿದ ಅವರು, ಯಾರ್ಯಾರ ಕಾಲದಲ್ಲಿ ಎಷ್ಟು ಪವರ್ ಜನರೇಟ್ ಆಗ್ತಿತ್ತು ಅಂತ ಮಾಹಿತಿ ಇದೆ, ನಾನಿದ್ದಾಗ ಎಷ್ಟಿತ್ತು, ಎಷ್ಟು ಎಕ್ಸಿಸ್ ಇತ್ತು ಏನು ಪ್ರಿಪರೇಷನ್ ಇತ್ತು ಗೊತ್ತಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.

More News