ಬೆಂಗಳೂರು: ಯಾರ್ಯಾರು ಏನೇನು ಆರೋಪ ಮಾಡುತ್ತಿದ್ದಾರೆ ಮಾಡಲಿ, ಐಟಿ ಅಧಿಕಾರಿಗಳು ಎಲ್ಲಾ ದಾಖಲೆ ಪರಿಶೀಲನೆ ಮಾಡುತ್ತಾರೆ, ಇವರು ಹೇಳಿದ ತಕ್ಷಣ ಆರೋಪ ಸಾಬೀತಾಗಲ್ಲ, ಕುಮಾರಸ್ವಾಮಿ ತಿಹಾರ್ ಜೈಲ್ ಬಗ್ಗೆನೂ ಮಾತನಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಏನೇನು ಮಾತಾಡಿಕೊಂಡು ಬಂದಿದ್ದಾರೆ ಗೊತ್ತಿದೆ, ಯಡಿಯೂರಪ್ಪ ಕಾಲದಲ್ಲಿ ರೇಡ್ ಏನಾಗಿತ್ತು ಅಂತನೂ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಹಿರಿಯ ನಟಿ ಲೀಲಾವತಿ, ಡಿಸಿಎಂ ಭೇಟಿ
ಹಿರಿಯ ನಟಿ ಲೀಲಾವತಿ ಅವರು ತಮ್ಮ ಆಸ್ಪತ್ರೆ ಉದ್ಘಾಟನೆಗೆ ಬನ್ನಿ ಎಂದು ಕರೆಯಲು ಬಂದಿದ್ದರು ಎಂದು ಹೇಳಿದ ಡಿ ಕೆ ಶಿವಕುಮಾರ್, ಅವರು ಡೇಟ್ ಕೇಳಿದ್ದಾರೆ, ಆಸ್ಪತ್ರೆಗೆ ಸಹಾಯ ಕೂಡ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದರು.
ಸರ್ಕಾರದಿಂದ ಆಸ್ಪತ್ರೆ ಸಿಬ್ಬಂದಿಗೆ ಕೇಳಿದ್ದಾರೆ, ಅವರ ಸೈಟ್, ಹೊಲ್ಡ್ ಆಗಿದೆ, ಏನು ಅಂತ ನೋಡುತ್ತೇನೆ, ಹಿರಿಯ ನಟಿ ಅವರಿಗೆ ಸೈಟ್ ಕೊಡ್ತೇವೆ ಎಂದು ಡಿಸಿಎಂ ತಿಳಿಸಿದರು.




