GOVT. TRYING TO HACK IPHONE: ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಐಫೋನ್ ಹ್ಯಾಕ್ : ಆಪಲ್ ಕಂಪನಿಯ ಎಚ್ಚರಿಕೆ ಸಂದೇಶವನ್ನ ಹಂಚಿಕೊಂಡ ಪ್ರತಿಪಕ್ಷದ ಸಂಸದರು

ನವದೆಹಲಿ: ಆಪಲ್ ತಂತ್ರಜ್ಞಾನ ಕಂಪನಿಯು ಪ್ರತಿಪಕ್ಷದ ಐವರು ಸಂಸದರಿಗೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ಹ್ಯಾಕ್ ಮಾಡಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಸಂದೇಶವನ್ನು ವಿರೋಧ ಪಕ್ಷಗಳ ಸಂಸದರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಿಡಿಕಾರಿದ್ದಾರೆ.

ಮೂಲಗಳ ಪ್ರಕಾರ ಟಿಎಂಸಿಯ ಮಹುವಾ ಮೊಯಿತ್ರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ನ ಶಶಿ ತರೂರ್, ಎಎಪಿಯ ರಾಘವ್ ಚಡ್ಡಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರುಗಳು ಆಪಲ್ ಕಂಪನಿಯಿಂದ ಎಚ್ಚರಿಕೆಯ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಸಂದೇಶ ಸ್ವೀಕರಿಸಿದ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಅನ್ನು ಗುರುಯಾಗಿಸಬಹುದು- ನಿಮ್ಮ APPLE ID ಯೊಂದಿಗೆ ಸಂಬಂಧಿಸಿರುವ ಐಫೋನ್ ಅನ್ನು ರಿಮೋಟ್ ಆಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು ಆಪಲ್ ನಂಬುತ್ತದೆ ಎಂಬ ಆಪಲ್ ಸಂದದೊಂದಿಗೆ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗೆ ಪ್ರವೇಶ ಮಾಡಿದರೆ, ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೋಫೋನ್ ಗಳನ್ನು ದೂರದಿಂದಲೇ ಪಡೆದುಕೊಳ್ಳಲು ಸಾಧ್ಯ ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಆಪಲ್ ಕೇಳಿಕೊಂಡಿದೆ.

More News