ಮುಂಬೈ: ನಟಿ ಹಾಗೂ ಮಾಡೆಲ್ ಉರ್ಫಿ ಜಾವೇದ್ ಅವರನ್ನು ಶುಕ್ರವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಇದು ಸುಳ್ಳು, ಮುಂಬೈ ಪೊಲೀಸರ ವೇಷದಲ್ಲಿ ಹಾಕಿಕೊಂಡು ತಮ್ಮನ್ನು ಬಂಧಿಸಲಾಗಿದೆ ಎಂಬ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಇಮೇಜ್ ಅನ್ನು ಹಾಳು ಮಾಡಿದ್ದಾರೆ.
One Can’t Violate Law Of The Land, For Cheap Publicity !
— मुंबई पोलीस – Mumbai Police (@MumbaiPolice) November 3, 2023
A viral video of a woman being allegedly arrested by Mumbai Police, in a case of obscenity is not true – insignia & uniform has been misused.
However, a criminal case has been registered against those involved in the…
ಈ ಹಿನ್ನೆಲೆಯಲ್ಲಿ ಉರ್ಫಿ ಜಾವೇದ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಡಿಮೆ ಬಟ್ಟೆ ಧರಿಸಿ ಅಶ್ಲೀಲತೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎನ್ನಲಾದ ವಿಡಿಯೋ ನಿಜವಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ಗದ ಪ್ರಚಾರಕ್ಕಾಗಿ ಪೊಲೀಸ್ ಚಿಹ್ನೆ ಮತ್ತು ಸಮವಸ್ತ್ರವನ್ನು ನಟಿ ಉರ್ಫಿ ಜಾವೇದ್ ದುರುಪಯೋಗಪಡಿಸಿಕೊಂಡಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸದಲ್ಲಿ ಅವರು ತೊಡಗಿದ್ದಾರೆ. ಎಂದು ಆರೋಪಿಸಿ ಅವರ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮುಂಬೈ ಪೊಲೀಸರು ಸಾಮಾಜಿಕ ಜಾಲ ತಾಣದಲ್ಲಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 171, 419, 500 ಹಾಗೂ 34 ಅಡಿ ದೂರು ದಾಖಲಿಸಿ, ನಕಲಿ ಪೊಲೀಸರನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅವರು ಬಂಧನಕ್ಕೆ ಬಳಿಸಿರುವ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಂಡುಡುಗೆ ಧರಸಿ ಆ ಫೋಟೋಗಳನ್ನು ಸಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಖ್ಯಾತಿಯನ್ನು ಗಳಿಸಿರುವ ನಟಿ ಉರ್ಫಿ ಜಾವೇದ್, ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಬ್ಬರು ಮಹಿಳಾ ಪೊಲೀಸರು ಆಕೆಯನ್ನು ಪೊಲೀಸ್ ವಾಹನದಲ್ಲಿ ಕುಳ್ಳಿರಿಸಿ ಕರೆದೊಯ್ಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.




