HE RUINING BBMP: ಬಿಬಿಎಂಪಿ ಹಾಳು ಮಾಡಿದ್ದೇ ಚೀಫ್ ಇಂಜಿನಿಯರ್: ಅವರು ಇರುವವರೆಗೂ ಬಿಬಿಎಂಪಿ ಉದ್ದಾರವಾಗಲ್ಲ: ಕೆಂಪಣ್ಣ ಆಕ್ರೋಶ

ಬೆಂಗಳೂರು : ಬಿಬಿಎಂಪಿ ಚೀಫ್ ಇಂಜಿನಿಯರ್ ಬಿ.ಎಸ್ ಪ್ರಹ್ಲಾದ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಅವರು ಇರುವವರೆಗೂ ಈ ಸಂಸ್ಥೆ ಉದ್ದಾರ ಆಗಲ್ಲ, ಈಗಲೂ ಹೇಳ್ತೀನಿ ಮುಂದೇನೂ ಹೇಳ್ತೀನಿ ಎಂದು ವಾಗ್ದಾಳಿ ನಡೆಸಿದರು.


ಬೆಂಗಳೂರಿನಲ್ಲಿ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು ಇದೊಂದು ಖಾಸಗಿ ಭೇಟಿಯಾಗಿತ್ತು, ಬೇರೆ ಯಾವುದೇ ರೀತಿಯ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಇಂಜಿನಿಯರ್ ವಿರುದ್ಧ ಕಿಡಿಕಾರಿದರು.
ಪ್ರಹ್ಲಾದ್ ಬಿಬಿಎಂಪಿಗೆ ಬಂದಾಗಿನಿಂದ ಒಂದೂ ಮೇಜರ್ ಕೆಲಸ ಮಾಡಿಲ್ಲ, ಅವರಿವರ ಹೆಸರು ಹೇಳಿ ದುಡ್ಡು ವಸೂಲಿ ಮಾಡುತ್ತಿದ್ದಾನೆ ಎಂದು ನೇರವಾಗಿ ಆರೋಪ ಮಾಡಿದ್ದಾರಲ್ಲದೆ, ಬಿಬಿಎಂಪಿಯನ್ನ ಹಾಳು ಮಾಡುತ್ತಿದ್ದಾರೆ ಎಂದರು.

ಇದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಗಮನಕ್ಕೆ ತರಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ಕೆಲಸಕ್ಕೆ ಬಂದಿದ್ದೇನೆ, ಹೀಗಾಗಿ ಮಾತಾಡಿಲ್ಲ, ನಮ್ಮ ಆಫೀಸರ್ ಜೊತೆಗೆ ಬಂದು ಮಾತನಾಡುತ್ತೇನೆ ಎಂದರು.
ಗುತ್ತಿಗೆದಾರರ ಪೂರ್ತಿ ಬಾಕಿ ನೀಡಲು ಒತ್ತಾಯ
ನಾನು ಗುತ್ತಿಗೆದಾರರ ಸಿನಿಯಾರಿಟಿ ಪ್ರಕಾರ ಹಣ ಕೊಡಿ ಅಂತ ಕೇಳಿದ್ದೇನೆ, ಸ್ವಲ್ಪ ಹಣ ರಿಲೀಸ್ ಮಾಡಿದ್ದಾರೆ, ನಮಗೆ ತೃಪ್ತಿ ಇದೆ ಅಂತ ಹೇಳಲ್ಲ, ಎಲ್ಲಾ ಗುತ್ತಿಗೆದಾರರ ಬಾಕಿ ಹಣ ಕ್ಲಿಯರ್ ಮಾಡೋಕೆ ಕೋರಿದ್ದೇವೆ, ಡಿಸೆಂಬರ್‌ ಒಳಗಡೆ ಟ್ರೈ ಮಾಡ್ತೀನಿ ಅಂತ ಹೇಳಿದ್ದಾರೆ ಎಂದರು.
ಪ್ರಹ್ಲಾದ್ ಬಗ್ಗೆ ಡಿಸಿಎಂಗೆ ದೂರು ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಕೆಂಪಣ್ಣ ಏನು ದೂರು ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ, ನನಗೆ ಕೈ ಬರಹದಲ್ಲಿ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

More News