TRIBBLE MURDER: ಆರು ವರ್ಷದ ಮಗು ಸೇರಿದಂತೆ ಅಣ್ಣನ ಕುಟುಂಬದ ಮೂವರನ್ನು ಕೊಚ್ಚಿ ಕೊಲೆಗೈದ ತಮ್ಮ

ಹಾವೇರಿ: ಅಣ್ಣನ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಕೊಲೆ ಮಾಡಿ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ನಡೆದಿದೆ. ಈ ಘಟನೆ ಹಾವೇರಿ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದೆ.
ಆಸ್ತಿ ವಿಚಾರವಾಗಿ ಅಣ್ಣನ ಕುಟುಂಬದ ಮೂರನ್ನು ಕೊಚ್ಚಿ, ಕೊಚ್ಚಿ ಕೊಲೆಗೈದ ತಮ್ಮ ಸದ್ಯ ಪರಾರಿಯಾಗಿದ್ದಾರೆ. ಅಣ್ಣನ‌ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಕೊಲೆಗೈದು, ಇಡೀ ಪರಿವಾರವನ್ನು ನಾಶ ಮಾಡಿದ್ದಾನೆ. ಆರು ವರ್ಷ ಹೆಣ್ಣು ಮತ್ತು ಹತ್ತು ವರ್ಷ ಗಂಡು ಮಗುವನ್ನು ನೋಡದೇ ಕೊಲೆ ಮಾಡಿದ್ದಾನೆ.


ಹಾವೇರಿ ಜಿಲ್ಲೆ ಹಾನಗಲ್ ತಾ‌. ಯಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರನ್ನು ಗೀತಾ ಹೊನಗೌಡ ಮರಿಗೌಡ್ರ, (35), ಅಕುಲ್ (10), ಅಂಕಿತಾ (6) ವರ್ಷ ಎಂದು ಗುರುತಿಸಲಾಗಿದೆ.
ಆರೋಪಿ ಕುಮಾರಮರಿಗೌಡ್ರ ಸುಮಾರು 35 ವರ್ಷ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಹಾನಗಲ್ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

More News