ಬೆಂಗಳೂರು: ವಿರೋಧ ಪಕ್ಷದ ನಾಯಕನಾಗಲು ಬಿಜೆಪಿಯಲ್ಲಿ ಸಮರ್ಥರು ಯಾರೂ ಇಲ್ಲವೇ..? ಬಸವರಾಜ ಬೊಮ್ಮಾಯಿ, ಆರ್ ಅಶೋಕ, ಅಶ್ವತ್ಥನಾರಾಯಣ, ಸುನೀಲ್ ಕುಮಾರ್, ಯತ್ನಾಳ ಅವರೆಲ್ಲಾ ಅಸಮರ್ಥರೇ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಪ್ರಶ್ನೆಗೆ ಬಿಜೆಪಿಯ ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ತಿರುಗೇಟು ನೀಡಿದ್ದಾರೆ.
Karnataka Industries Minister M.B.Patil has asked if there are no competent people in BJP to be Opposition leader and why we are after JDS leader H.D.Kumaraswamy to take the lead. First, they have to answer the question if there were no competent leaders in Congress to be CM? 1/2 pic.twitter.com/FXmxgNiEsP
— Lahar Singh Siroya (@LaharSingh_MP) November 6, 2023
ಕೈಗಾರಿಕಾ ಸಚಿವರ ಈ ಟ್ವೀಟ್ ಗೆ ಟ್ವೀಟ್ ಮೂಲಕ ಉತ್ತರ ನೀಡಿರುವ ಲೆಹರ್ ಸಿಂಗ್, ಜೆಡಿಎಸ್ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ ಕೆ ಶಿವಕುಮಾರ್, ಎಚ್ ಕೆ ಪಾಟೀಲ್ ಅಥವಾ ಎಂ ಬಿ ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲೆಹರ್ ಸಿಂಗ್ ಮಾಡಿರುವ ಟ್ವೀಟ್ ನ ಸಂಪೂರ್ಣ ವಿವರ ಇಲ್ಲಿದೆ.
“ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗಲು ಸಮರ್ಥರಿಲ್ಲವೇ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಳತ್ವ ವಹಿಸಲು ಬಿಜೆಪಿಯವರು ಏಕೆ ಕೇಳುತ್ತಿದ್ದಾರೆ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಆದರೆ, ಮೊದಲು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥ ನಾಯಕರಿರಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿ.”
“ಜೆಡಿಎಸ್ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ?”




