Congress Joining: ಬಿಜೆಪಿ ಜೆಡಿಎಸ್ ಮೈತ್ರಿ ಎಫೆಕ್ಟ್: ತೆನೆ ಇಳಿಸಿ “ಕೈ” ಹಿಡಿದ ಡಿಸಿ ಗೌರಿ ಶಂಕರ್, ಮಂಜುನಾಥ್

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿ ಹಿನ್ನಲೆ ಕ್ಷೇತ್ರವಾರು ಅಸಮಧಾನ ತಲೆ ದೋರಿದೆ. ಸೆಕ್ಯೂಲರ್ ಪಾರ್ಟಿ ಎಂಬ ಚಿಂತನೆಯಿಂದ ತಲೆ ಎತ್ತಿದ ಪ್ರಾದೇಶಿಕ ಪಕ್ಷ ಬಲ ಪಂಥೀಯ ಚಿಂತನೆ ಇರುವ ಬಿಜೆಪಿ ಜೊತೆಗೆ ಕೈ ಜೋಡಿಸಿರುವುದು ಸೈದ್ದಾಂತಿಕ ನೆಲೆಗಟ್ಟಿನ ಮೇಲೆ ರಾಜಕೀಯಕ್ಕೆ ಧುಮುಕಿದ ನಾಯಕರಿಗೆ ಕಸಿವಿಸಿಯಾಗಿದೆ. ಲೋಕಸಭಾ ಚುನಾವಣೆಯ ಸಿದ್ಧತೆ ಹೊತ್ತಲ್ಲಿನಲ್ಲೇ ತುಮಕೂರಿನಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌ ಎದುರಾಗಿದೆ

ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಮತ್ತು ಬೆಂಗಳೂರು ದಾಸರಹಳ್ಳಿಯ ಮಾಜಿ ಶಾಸಕ ಮಂಜುನಾಥ್ ಜೆಡಿಎಸ್ ತೊರೆದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆದರು.

ಸೇರ್ಪಡೆ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಬಿ.ಎಲ್.ಶಂಕರ್, ಕರ್ನಾಟಕದಲ್ಲಿ ರಾಜಕೀಯ ಧೃವೀಕರಣ ನಡೆದಿಲ್ಲ. ಸೈದ್ಧಾಂತಿಕ ದೃವೀಕರಣ ನಡೆಯುತ್ತಿದೆ. ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು. ಹಾಗಾಗಿ ಎಲ್ಲರೂ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಮಂಜುನಾಥ್,ಗೌರಿಶಂಕರ್ ಸೋಲಬೇಕಿರಲಿಲ್ಲ. ನಮ್ಮ‌ ಮನವಿ ಕೇಳಿದ್ದರೆ ಇಬ್ಬರೂ ಶಾಸಕರಾಗಿರುತ್ತಿದ್ರು. ಅವರಿಬ್ಬರು ಮಾಜಿಗಳು ಆಗ್ತಿರಲಿಲ್ಲ. ಆಗ ಇಬ್ಬರು ಮನಸ್ಸು ಮಾಡಲಿಲ್ಲ. ಈಗಲಾದ್ರೂ ಅವರು ಪಕ್ಷಕ್ಕೆ ಬಂದಿದ್ದಾರೆ. ಸರ್ಕಾರ ಯಾವತ್ತಿಗೂ ಬೀಳುವುದಿಲ್ಲ. ಈಗ ಬೀಳುತ್ತೆ ಆಗ ಬೀಳುತ್ತೆ ಅನ್ನೋದು ಸುಳ್ಳು. ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರಂತರ ಅಪಪ್ರಚಾರ ಬಿಜೆಪಿ,ಜೆಡಿಎಸ್ ಮಾಡ್ತಿದೆ. ಇಬ್ಬರು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ
ಅವಕಾಶ ಸಿಂಧು ರಾಜಕಾರಣ ಮಾಡಿಕೊಂಡಿದ್ದಾರೆ.
ಪಂಚರಾಜ್ಯಗಳಲ್ಲೂ ನಾವು ಅಧಿಕಾರಕ್ಕೆ ಬರ್ತೇವೆ
ಮಧ್ಯಪ್ರದೇಶದಲ್ಲಿ ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ.
ತೆಲಂಗಾಣ,ರಾಜಸ್ತಾನದಲ್ಲೂ ಗ್ಯಾರೆಂಟಿ ಘೋಷಣೆ
ಮಾಡಲಿದ್ದೇವೆ.. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಗೆಲ್ತೇವೆ ಎಂದು ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಹೇಳಿದರು.

More News