ಬೆಂಗಳೂರು: ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡತಿ ಶ್ರೀಲೀಲಾ ಸಾಕಷ್ಟು ಸದ್ದು ಮಾಡುತ್ತಿದ್ದು, ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಅವರು ನಟಿಸಿರುವ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ, ಇದರ ನಡುವೆ ಅವರು ಕಪ್ಪು ಬಣ್ಣದ ಸೀರೆಯುಟ್ಟು ಕೊಟ್ಟ ಫೋಸ್ ಮಾತ್ರ ಅವರ ಅಭಿಮಾನಿಗಳಲ್ಲಿ ಸ್ವಲ್ಪ ನಿರಾಶೆ ತಂದಿದೆ.

ಬ್ಲಾಕ್ ಡೀಪ್ ನೆಕ್ ಬ್ಲೌಸ್ ಮತ್ತು ಬ್ಲಾಕ್ ಸೀರೆಯುಟ್ಟ ಶ್ರೀಲೀಲಾ ಗ್ಲಾಮರಸ್ ಆಗಿ ಫೋಸ್ ನೀಡಿದ್ದಾರೆ. ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಯ ಸ್ವೈಲ್ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ, ಗುಮ್ ಎಂದು ಇರುವ ಬದಲು ಸ್ವಲ್ಪ ನಗು ಮುಖದಲ್ಲಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ.

ನಿಮ್ಮ ನಗು ತುಂಬಾ ಚೆನ್ನಾಗಿದೆ. ಅದನ್ನು ಯಾಕೆ ಮರೆಮಾಚಿದ್ದೀರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. ಸ್ವಲ್ಪ ಸ್ಟೈಲ್ ಮಾಡಿ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ. ಕಪ್ಪು ಬಳೆಗಳ ಮಧ್ಯೆ ಸಿಲ್ವರ್ ಶೇಟ್ ಬ್ಯಾಂಗಲ್ಸ್ ಧರಿಸಿದ ಶ್ರೀಲೀಲಾ ಅವರು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಕಪ್ಪು ಬಣ್ಣದ ಉಡುಗೆಯಲ್ಲಿ ಲೈಂಟಿಂಗ್ಸ್ ಕೂಡ ಅಷ್ಟೇ ಚೆನ್ನಾಗಿ ಮಾಡಿ ಫೋಟೋ ಶೂಟ್ ನಲ್ಲಿ ನಗು ಒಂದು ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಸದ್ಯ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿರುವ ಅವರು, ಧಮಾಕಾ ಚಿತ್ರದೊಂದಿದೆ ಫಾರ್ಮ್ ಪಡೆದಿದ್ದರು.

ತೀರಾ ಇತ್ತೀಚೆಗೆ ನಟಿಸಿರುವ ಭಗವಂತ್ ಕೇಸರಿ ಇದೇ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೌಂದರ್ಯ ಮತ್ತು ನಟನೆ ಹಾಗೆಯೇ ನೃತ್ಯದಲ್ಲಿ ನನಗೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂಬ ಮನೋಭಾವನೆ ಶ್ರೀಲೀಲಾ ಹೊಂದಿದ್ದಾರೆ ಎಂದು ಟಾಲಿವುಡ್ ನಲ್ಲಿ ಕೇಳಿಬರುತ್ತಿರುವ ಮಾತಾಗಿದೆ.




