YES HE IS MY SON: ಸಂಸತ್ ಕಲಾಪಕ್ಕೆ ನುಗ್ಗಿದವನು ನನ್ನ ಮಗ: ಅವನು ತಪ್ಪು ಮಾಡಿದ್ದರೆ ಅವನಿಗೆ ಗಲ್ಲಿಗೇರಿಸಿ: ಆರೋಪಿ ಮನೋರಂಜನ್ ತಂದೆ ದೇವರಾಜೇಗೌಡ

ಮೈಸೂರು : ಮನೋರಂಜನ್ ನನ್ನ ಮಗ ನಿಜ. ನಾವೆಲ್ಲ ರೈತ ಕುಟುಂಬದಿಂದ ಬಂದಿದ್ದು, ನನ್ನ ಮಗನಿಗೆ ವಿದ್ಯೆ, ಬುದ್ಧಿ, ವಿವೇಚನೆ ಕೊಟ್ಟಿದ್ದೀವಿ. ಅವನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ ಎಂದು ಆತನ ತಂದೆ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಹಾರಿ ಬಣ್ಣದ ಹೊಗೆ ಬಿಟ್ಟ ಯುವಕ ಮೈಸೂರಿನವನಾಗಿದ್ದು, ಈತ ಮೈಸೂರು ಸಂಸದರ ಪಾಸ್ ಪಡೆದು ಒಳಗೆ ಹೋಗಿದ್ದಾನೆ. ಈ ಘಟನೆ ಬಳಿಕ ಮನೋರಂಜನ್ ತಂದೆ ದೇವರಾಜೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈಸೂರಿನ ವಿಜಯನಗರದ ನಿವಾಸಿಯಾಗಿರುವ ಅವರು, ಮನೋರಂಜನ್ ಏನು ಮಾಡುತ್ತಿದ್ದಾನೆ’ ಮಾಡ್ತಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಇವತ್ತಿನ ಘಟನೆ ಏನಾಗಿದೆ ಅದು ಖಂಡಿನೀಯ. ಅದು ನನ್ನ ಮಗನೇ ಮಾಡಿದ್ರು’ ಯಾರೆ ಮಾಡಿದ್ರು ತಪ್ಪು ಎಂದು ಗದ್ಗರಿತರಾಗಿ ಅವರ ತಂದೆ ಹೇಳಿದ್ದಾರೆ.

ನನ್ನ ಮಗ ಬಿಇ ಇಂಜಿನಿಯರ್ ಮಾಡಿದ್ದ. ಕೋಳಿ ಸಾಗಾಣಿಕೆ, ಕುರಿ ಸಾಗಣಿಕೆಯ ಪ್ರಾಜೆಕ್ಟ್ ಮಾಡ್ಕೊಂಡಿದ್ದ. ಸ್ವಾಮಿ ವಿವೇಕಾನಂದರ ಬುಕ್ಸ್ ಹೆಚ್ಚಾಗಿ ಓದುತ್ತಿದ್ದ. ಸಮಾಜದಲ್ಲಿ ಬಡವರಿಗೆ ಒಳಿತನ್ನ ಮಾಡೋ ಭಾವನೆ ಇತ್ತು. ಆದರೆ ಯಾರಿಗೂ ಕೇಡು ಮಾಡೋ ಬುದ್ಧಿ ಅವನಲ್ಲಿ ಇರಲಿಲ್ಲ ಎಂದು ಮನೋರಂಜನ್ ತಂದೆ ಹೇಳಿದರು.
ಸಂಸತ್ ಭವನ ನಮ್ಮ ಮನೆ ಇದ್ದಂತೆ ಸರ್. ಅದಕ್ಕೆ ಯಾರೆ ಏನೇ ಮಾಡಿದ್ರು ಅದು ತಪ್ಪು, ಖಂಡನೀಯ. ಅವನಿಗೆ ಕೋಳಿ, ಕುರಿ ಸಾಕಾಣಿಕೆ, ಅಡಿಕೆ ಮಾಡ್ತಿದ್ದವನು ಎಂದು ಮನೋರಂಜನ್ ತಂದೆ ದೇವರಾಜೇಗೌಡ ಹೇಳಿದರು.

More News