MSD JERSEY NUMBER RETIRED BY BCCI..!: ಎಂ ಎಸ್ ಧೋನಿ ಜೆರ್ಸಿ ಸಂಖ್ಯೆ ಇನ್ನು ಮುಂದೆ ಯಾರಿಗೂ ಸಿಗಲ್ಲ: ಸಚಿನ್ ತೆಂಡೂಲ್ಕರ್ ಸಾಲಿಗೆ ಸೇರಿದ ಕ್ಯಾಪ್ಟನ್ ಕೂಲ್..

ನವದೆಹಲಿ: ಕ್ಯಾಪ್ಟನ್ ಕೂಲ್ ನೇತೃತ್ವದ ಇಂಡಿಯಾ ಕ್ರಿಕೆಟ್ ತಂಡ ವಿಶ್ವ ಕಪ್ ವಿಜೇತ ತಂಡ. ಈ ತಂಡದ ನಾಯಕರಾಗಿದ್ದ ಎಂ ಎಸ್ ಧೋನಿ ಅವರು ನಂಬರ್ 7 ಜೆರ್ಸಿ ಇನ್ನುಂದೆ ಯಾವುದೇ ಆಟಗಾರರಿಗೆ ಸಿಗುವುದಿಲ್ಲ. ಬಿಸಿಸಿಐ ಆ ಐಕಾನಿಕ್ ಜೆರ್ಸಿ ಸಂಖ್ಯೆಯನ್ನು ನಿವೃತ್ತಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕ್ರೀಡೆಗೆ ಎಂ ಎಸ್ ಧೋನಿಯವರು ಸಲ್ಲಿಸಿರುವ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಧೋನಿಯವರು ಬಳಸುತ್ತಿದ್ದ ಜೆರ್ಸಿಯನ್ನು ನಿವೃತ್ತಿ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

2020 ಆಗಸ್ಚಟ್ 15ರಂದು ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಅದಾದ ಬಳಿಕ ಮೂರು ವರ್ಷಗಳಿಂದಲೂ ಅವರು ಐಪಿಎಲ್ ಸಕ್ರೀಯರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಟವಾಡುತ್ತಿದ್ದಾರೆ.
2017ರಲ್ಲಿ ಬ್ಯಾಟಿಂಗ್ ದಿಗ್ಗಜ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಧರಿಸಿದ್ದ 10 ನೇ ನಂಬರ್ ಜೆರ್ಸಿಯನ್ನು ಕೂಡ ಬಿಸಿಸಿಐ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು. ಅದರಂತೆಯೇ ಇದೀಗ ಎಂಎಸ್ ಧೋನಿಯವರ ನಂಬರ್ 7 ಕೂಡ ನಿವೃತ್ತಿಯ ಅಂಚಿನಲ್ಲಿದೆ.
ಒಮ್ಮೆ ಬಿಸಿಸಿಐ ನಿರ್ಧಾರ ಕೈಗೊಂಡ ನಂತರ ಈ ಸಂಖ್ಯೆಯ ಜೆರ್ಸಿಗಳು ಯಾವುದೇ ಆಟಗಾರರಿಗೆ ಸಿಗುವುದಿಲ್ಲ. ಬಿಸಿಸಿಐ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.

More News