ಹುಬ್ಬಳ್ಳಿ : ಕರಸೇವಕ ಶ್ರೀಕಾಂತ್ ಪೂಜಾರಿ ಓರ್ವ ರೌಡಿ ಶೀಟರ್, ಕ್ರಿಮಿನಲ್, ಈತನ ವಿರುದ್ಧ ಮ 16 ಕೇಸ್ ಇವೆ, ಹೋರಾಟ ಮಾಡುತ್ತಿರುವ ಬಿಜೆಪಿಗರೇ ನಿಮ್ಮ ಅಜೆಂಡಾ ಹೇಳಬಿಡಿ, ರೌಡಿ ಶೀಟರ್ ಕ್ರಿಮಿನಲ್ ಹಿನ್ನಲೆ ಇದ್ದವರು ನಿಮ್ಮ ಪಕ್ಷದ ಪಿಲ್ಲರ್ ಗಳಾ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಇವರೇ ನಮ್ಮ ಪಿಲ್ಲರ್ ಗಳು ಅಂತಾ ತೋರಿಸೋಕೆ ಬರ್ತೀದೀರಾ, ರಾಮನ ಭಕ್ತರು ಸರಾಯಿ ಮಾರ್ತಾರಾ. ಮಟ್ಕಾ ಜೂಜಾಟ ಆಡೋನು ರಾಮ ಭಕ್ತನಾ ಎಂದು ಕಿಡಿಕಾರಿದ್ದಾರೆ.
ರಾಮನ ವಿಚಾರಗಳನ್ನು ತಿರಚೋ ಕೆಲಸ ದೇಶದಲ್ಲಿ ಆಗುತ್ತಿದೆ, ಜನ ಇವತ್ತು ನಿರ್ಧಾರ ಮಾಡಬೇಕು, ಬಿಜೆಪಿ ಎಂತಹ ವ್ಯಕ್ತಿ ಪರ ಪ್ರತಿಭಟನೆ ಮಾಡುತ್ತಿದ್ದಾರೆ ಅನ್ನೋದು. ಇದು ಕೋರ್ಟ್ ಆರ್ಡರ್ ಇದೆ, ಹಾಗಾಗಿ ಬಂಧನ ಮಾಡಿದ್ದಾರೆ, ಇವತ್ತು ರಾಮ ರಾಜ್ಯ ಬಿಟ್ಟು, ರಾವಣ ರಾಜ್ಯ ಬೇಕಾಗಿದೆ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮ ಅನ್ನೋದು ಬೇರೆ ಧರ್ಮವನ್ನು ಗೌರವದಿಂದ ಕಾಣೋದು ಅದರ ತತ್ವ, ಆದ್ರೆ ಇವರು ಇದೇ ವಿಚಾರದಿಂದ ದೇಶ ಒಡೆಯೋ ಕೆಲಸ ಮಾಡೀದಾರೆ, ಶಹರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ಅವರನ್ನು ಅಮಾನತ್ತು ಮಾಡೋ ಪ್ರಶ್ನೆಯೇ ಇಲ್ಲ, ಅವರೊಬ್ಬ ಖಡಕ್ ಅಧಿಕಾರಿ ಎಂದು ಪ್ರಸಾದ್ ಅಬ್ಬಯ್ಯ ಸ್ಪಷ್ಟಪಡಿಸಿದರು.
ರೌಡಿ ಶೀಟರ್ ಗಳಿಗೆ ಅಧಿಕಾರಿ ನಡುಕ ಹುಟ್ಟಿಸಿದ್ದಾರೆ, ರಜೆ ಹಾಕಿ ಹೋಗಿದ್ದಾರೆ ಅವರನ್ನು ತೆಗೆಯೋ ಪ್ರಶ್ನೆಯೇ ಬರಲ್ಲ ಎಂದು ಹೇಳಿಗದ ಶಾಸಕರು, ಪೊಲೀಸರು ಮಾಡೋ ಕೆಲಸಕ್ಕೆ ಆತ್ಮಸ್ಥೈರ್ಯ ಕುಂದಿಸೋ ಕೆಲಸ ಆಗಬಾರದು ಎಂದರು.




