ದೆಹಲಿ : ಇಲ್ಲಿನ ಬಾಬರ್ ರಸ್ತೆಯ ನಾಮಫಲಕವನ್ನು ಹಿಂದೂ ಸೇನಾ ಕಾರ್ಯಕರ್ತರು ಅಯೋಧ್ಯ ಮಾರ್ಗ ಎಂಬ ಪೋಸ್ಟರ್ ಗಳನ್ನು ಅಂಟಿಸಿದ ಘಟನೆ ಇಂದು ಜರುಗಿದೆ. ಹಿಂದೂ ಸೇನಾ ಕಾರ್ಯಕರ್ತರೆಂದು ಹೇಳಲಾಗುತ್ತಿರುವ ವ್ಯಕ್ತಿಗಳು ಪೋಸ್ಟರ್ ಅನ್ನು ಅಂಟಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪೋಸ್ಟರ್ ಗಳನ್ನು ತೆರವುಗೊಳಿಸಿದ್ದಾರೆ. ಈ ವಿಡಿಯೋವನ್ನು ಎಎನ್ಐ ಸುದ್ದಿಸಂಸ್ಥೆ ತನ್ನ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ.

ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಸೇನೆ ಅನೇಕ ದಿನಗಳಿಂದ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈಗ ಬಾಬರಿ ಮಸೀದಿ ಇಲ್ಲದಿರುವಾಗ ದೆಹಲಿಯ ಬಾಬರ್ ರಸ್ತೆಯಿಂದ ಏನು ಪ್ರಯೋಜನ ಎಂದು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಪ್ರಶ್ನಿಸಿದ್ದಾರೆ.




