WE CAN’T TAKE EVERYONE’S OPINION: ನಾವು ಪೂಜಿಸೋದು ಗೌರವಿಸೋದು ರಾಮಾಯಣದ ರಾಮನನ್ನು, ಶ್ರೀರಾಮಚಂದ್ರನನ್ನು: ಬಿಜೆಪಿಯ ರಾಮನ್ನಲ್ಲ : ಸಿಎಂ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆ ತಡೆಯೊಡ್ಡಲಾಗಿದೆ, ಅವರ ಪಾದಯಾತ್ರೆ ‌ಮಟ್ಟಹಾಕಿ ಅವರ ಸ್ವಾತಂತ್ರ್ಯ ಕಸಿಯುವ ಪ್ರಯತ್ನ ಕೇಂದ್ರ ಮತ್ತು ಆಸ್ಸಾಂ ಸರ್ಕಾರ ಮಾಡುತ್ತಿದೆ ಎಂದು ಮುಖ್ಮಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಮಸ್ಯೆಗಳಿಗಾಗಿ ಅವರು ಪಾದಯಾತ್ರೆ ಮಾಡುತ್ತಿದ್ದಾರೆ, ಆದ್ರೆ ಅದನ್ನ ತಡೆಯುವ ಕೆಲಸ ಬಿಜೆಪಿ ಮತ್ತು ಹಲವು ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿದೆ ಎಂದು ತಿಳಿಸಿದರು.
ಗೃಹ ಸಚಿವ ಪರಮೇಶ್ವರ್ ಗೆ ಟಾಂಗ್

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನನ್ನ ಪರಿಗಣನೆ ತೆಗದುಕೊಂಡಿಲ್ಲ ಎಂಬ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದು, ಎಲ್ಲರ ಅಭಿಪ್ರಾಯ ಪಡೆಯಲು ಕಷ್ಟವಾಗುತ್ತೆ ಎಂದರು.
MLA ಗಳದ್ದು ಎಲ್ಲಾ ಕ್ಲೀಯರ್ ಆಗಿದೆ, ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗುತ್ತಿದೆ, ನಾವು ಡಿಕೆಶಿ ಚರ್ಚೆ ನಡೆಸಿದ್ದೇವೆ, ವೇಣುಗೋಪಾಲ್ ಅವರ ಸಹಿ ಆಗಬೇಕಿದೆ ಎಂದರು. ಪರಮೇಶ್ವರ್ ಹೇಳಿಕೆ ಕುರಿತಂತೆ ನಾನು ಈಗಾಗಲೇ ಪರಮೇಶ್ವರ್ ಜೊತೆ ಮಾತನಾಡಿದ್ದೇನೆ ಎಂದು ಸಿಎಂ ತಿಳಿಸಿದರು.
ಬಿಜೆಪಿ 3 ಕೋಟಿ ಜನರನ್ನು ಅಯೋಧ್ಯೆಗೆ ಕಳಿಹಿಸುತ್ತಾರಂತೆ

ಬಿಜೆಪಿಯು ಮೂರು ಕೋಟಿ ಜನರನ್ನು ಅಯೋಧ್ಯೆಗೆ ಕಳುಹಿಸುತ್ತಾರಂತೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ರಾಮಮಂದಿರ ಇಲ್ವಾ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ‌ಹಳ್ಳಿ ಹಳ್ಳಿಗೂ ರಾಮಮಂದಿರ ಇದೆ, ಅಲ್ಲಿರೋ ಮೂರ್ತಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಅಲ್ವಾ? ನೋಡಿ, ಬಿಜೆಪಿ ರಾಜಕೀಯ ಮಾಡೋದಕ್ಕೆ ಹೊರಟಿದೆ, ನಾವು ಅವರ ರಾಜಕೀಯವನ್ನು ವಿರೋಧಿಸುತ್ತೇವೆ ಎಂದರು.
ನಾವು ಗೌರವಿಸೋದು, ಪ್ರೀತಿಸೋದು, ಪೂಜೆ ಮಾಡೋದು ಮಹಾತ್ಮ ಗಾಂಧಿ ಹೇಳಿದ ರಾಮನನ್ನು, ದಶರಥನ ರಾಮನನ್ನು, ರಾಮಾಯಣದ ರಾಮನನ್ನು, ಶ್ರೀರಾಮಚಂದ್ರನನ್ನು. ಬಿಜೆಪಿಯ ರಾಮನನ್ನು ಅಲ್ಲ ಎಂದು ಸಿೆಂ ಬಿಜೆಪಿಯನ್ನು ಟೀಕಿಸಿದರು.
ಅರ್ಚಕರ ವೇತನ ವಾಪಸ್ ಕೇಳಿದ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ಅವರು ತೆರಳಿದರು.

More News