FOUR WOMEN CRICKETERS ANNOUNVED RETIREMENT SAMEDAY: ವಿಂಡೀಸ್ ಕ್ರಿಕೆಟ್ ಮಂಡಳಿಗೆ ಶಾಕ್: ಒಂದೇ ದಿನ ನಾಲ್ವರು ಮಹಿಳಾ ಕ್ರಿಕೆಟ್ ಆಟಗಾರರು ನಿವೃತ್ತಿ ಘೋಷಣೆ..!

ನವದೆಹಲಿ :ಕೇವಲ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಾತ್ರವಲ್ಲದೆ ಜಾಗತಿಕ ಮಹಿಳಾ ಕ್ರಿಕೆಟ್ ಗೆ ವೆಸ್ಟ್ ಇಂಡೀಸ್ ತಂಡದ ಆಟಗಾರ್ತಿಯರು ಶಾಕ್ ನೀಡಿದ್ದಾರೆ.
ತಂಡದ ಪ್ರಮುಖ ನಾಲ್ಕು ಆಟಗಾರ್ತಿಯವರು ಒಂದೇ ದಿನ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡದ ಅನಿಸ್ಸಾ ಮೊಹಮ್ಮದ್, ಶಕೀರಾ ಸೆಲ್ಮನ್, ಕೈಶೋನಾ ನೈಟ್ ಮತ್ತು ಕಯಾಸಿಯಾ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಈ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದ್ದು, ಒಂದೇ ದೇಶದ ನಾಲ್ವರು ಆಟಗಾರ್ತಿಯವರು ಒಮ್ಮೆಲೇ ನಿವೃತ್ತಿ ಘೋಷಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದೆ.
2016ರಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮಹಿಳಾ ತಂಡವು ಗೆದ್ದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ತಂಡದಲ್ಲಿ ಈ ನಾಲ್ವರು ಆಟಗಾರ್ತಿಯರು ವೆಸ್ಟ್ ಇಂಡೀಸ್ ಪರ ಆಟವಾಡಿದ್ದರು.
ಕ್ರಿಕೆಟ್ ಜಗತ್ತಿನಲ್ಲಿ ವೆಸ್ಟ್ ಇಂಡೀಸ್ ತಂಡ ಸ್ಥಿತಿ ಚೆನ್ನಾಗಿಲ್ಲ ಎಂದು ವಿಶ್ಲೇಷಿಸಲಾಗಿದೆ. ಆ ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಪರದಾಡುತ್ತಿದೆ. ಆದ್ದರಿಂದ ಅನೇಕ ಆಟಗಾರರು ವಿಶ್ವದಾದ್ಯಂತ ನಡೆಯುವ ಲೀಗ್ ಮ್ಯಾಚ್ ಗಳಲ್ಲಿ ಆಡಲು ಬಯಸುತ್ತಿದ್ದಾರೆ.

More News