ಬೆಂಗಳೂರು : ಬಿಜೆಪಿಯವರಿಗೆ ನನ್ನ ಮೇಲೆ ಬೇರೆ ಏನು ಇಲ್ಲವಲ್ಲ, ಅದಕ್ಕೆ ಹಿಂದು ವಿರೋಧಿ ಅಂತ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, I am a Hindu, I love all people, From all religion ಎಂದು ತಿಳಿಸಿದರಲ್ಲದೆ, Secularism ಎಂದರೇನು..?, ಸಂವಿಧಾನದಲ್ಲಿ ಏನ್ ಹೇಳಿದ್ದಾರೆ..?, ಸಹಬಾಳ್ವೆ ಸಹಿಷ್ಣುತೆ ಅದ್ರಲ್ಲಿ ನಂಬಿಕೆ ಇಟ್ಟುಕೊಂಡಿರುವನು ನಾನು ಎಂದರು.
ಬಿಜೆಪಿಯವರು ಅನಗತ್ಯವಾಗಿ ಕ್ರೀಯೇಟ್ ಮಾಡುತ್ತಿದ್ದಾರೆ, ಅವರ ಅಂಜೆಡಾ ಇದೆಯಲ್ಲ ಅದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು. ಅವರು ಪರ್ಮಿಷನ್ ತಗೆದುಕೊಂಡಿರೋದು ನ್ಯಾಷನಲ್ ಫ್ಲಾಗ್ ಮತ್ತು ಕನ್ನಡ ಧ್ವಜ ಹಾರಿಸ್ತೀವಿ ಅಂತ ಆದರೆ ಹಾರಿಸಿರೋದು ಮಾತ್ರ ಬೇರೆನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಪರ್ಮಿಷನ್ ತೆಗೆದುಕೊಂಡಿದ್ದಾರೆ ಅದನ್ನ ಮಾಡಬೇಕಿತ್ತು, ಅದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ, ಬಿಜೆಪಿಯವರೇ ಈ ಘಟನೆಗೆ ಪ್ರಚೋದನೆ ಮಾಡಿದ್ದಾರೆ, ಪ್ರತಿಭಟನೆ ಯಾತಕ್ಕಾಗಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಎಲೆಕ್ಷನ್ ಬರ್ತಿದೆ ಅದಕ್ಕಾಗಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ, ಎಲೆಕ್ಷನ್ ಗೋಸ್ಕರ ಇವರು ಮಾಡುತ್ತಿರೋದು, ಪಂಚಾಯತಿ ಅವರು ಏನ್ ಪರ್ಮಿಷನ್ ಕೊಟ್ಟಿದ್ದರು ಅದ್ರ ಪ್ರಕಾರ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.




