ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು ಬಿಜೆಪಿ ನೇತೃತ್ವದ ಎನ್ ಡಿ ಎ ಸೇರಿದ್ದರಿಂದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ತೀವ್ರವಾಗಿ ಟಿಕಾ ಪ್ರಹಾರ ನಡೆಸಿದ್ದಾರೆ.
कूड़ा गया फिर से कूड़ेदानी में
— Rohini Acharya (@RohiniAcharya2) January 28, 2024
कूड़ा – मंडली को बदबूदार कूड़ा मुबारक pic.twitter.com/gQvablD7fC
ನಿತೀಶ್ ಕುಮಾರ್ ಅವರನ್ನು ನೇರವಾಗಿ ಉಲ್ಲೇಖಿಸುವಂತೆ ಟ್ವೀಟ್ ಮಾಡಿರುವ ಅವರು ಅವರನ್ನು ಕಸ ಎಂದು ಛೇಡಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಹಿಂದೆ ಎನ್ ಡಿಎನಲ್ಲೇ ಇದ್ದ ನಿತೀಶ್ ಕುಮಾರ್ ಅದರಿಂದ ಹೊರಬಂದು ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸಿದ್ದರು. 18 ತಿಂಗಳಿಗೂ ಕಡಿಮೆ ಅವಧಿಗೆ ಅವರು ಮತ್ತೆ ಏನ್ ಡಿ ಎ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿಣಿ ಆಕ್ರೋಶ ವ್ಯಕ್ತಪಡಿಸಿದ್ದು, ಕಸ ಮತ್ತೆ ಕಸದ ಬಟ್ಟಿಗೆ ಸೇರಿದೆ. ಕಸದ ಗುಂಪಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.




