Search

HINDU TEMPLE IN UAE: ಪ್ರಧಾನಿ ಮೋದಿ ಏಳನೇ ಬಾರಿಗೆ ಫೆ.14ಕ್ಕೆ ಯುಎಇ ಭೇಟಿ: ಮೊದಲ ಹಿಂದು ದೇವಾಲಯ ಉದ್ಘಾಟನೆ

ಅಬುಧಾಬಿ: ಪ್ರಧಾನಮಂತ್ರಿಯಾದ ಬಳಿಕ ನರೇಂದ್ರ ಮೋದಿಯವರು ಏಳನೇ ಬಾರಿಗೆ ಯುಎಇಗೆ ಭೇಟಿ ನೀಡಲಿದ್ದಾರೆ. ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ಹಿಂದು ದೇವಾಲಯವನ್ನು ಫೆಬ್ರವರಿ 14 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ವಾಮಿ ನಾರಾಯಣ ಸಂಸ್ಥೆ, ಈ ದೇವಾಲಯ ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯವಾಗಿದೆ ಎಂದು ತಿಳಿಸಿದೆ.
ಉದ್ಘಾಟನೆಗಾಗಿ ಬಿಎಪಿಎಸ್ ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಈಗಾಗಲೇ ಯುಎಇಗೆ ತೆರಳಿದ್ದಾರೆ. ಅಬುಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ಈ ದೇವಾಲಯನ್ನು ನಿರ್ಮಿಸಲಾಗಿದೆ.
ಸೌಹಾರ್ದತೆಯ ಹಬ್ಬವನ್ನಾಗಿ ಈ ಮಂದಿರದ ಉದ್ಘಾಟನೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿರುವ ಸ್ವಾಮಿ ನಾರಾಯಣ ಸಂಸ್ಥೆ, ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದೆ.

More News

You cannot copy content of this page