JDS ALSO IN RAJYA SABHA RACE: ರಂಗೇರಿದ ರಾಜ್ಯ ಸಭಾ ಚುನಾವಣೆ: ಕಾಂಗ್ರೆಸ್ 3, ಬಿಜೆಪಿ 1 ಹಾಗೂ ಜೆಡಿಎಸ್ 1 ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಗೆ ಅಡ್ಡಮತದಾನದ ಭೀತಿ

ವಿಧಾನಸೌಧ: ರಾಜ್ಯಸಭೆಗೆ ವಿಧಾನಸಭೆಯಿಂದ ನಡೆಯುವ ಚುನಾವಣೆ ಸಂಬಂಧ ಇವತ್ತು ಒಟ್ಟು ಐವರು ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ರಾಜ್ಯ ಸಭಾ ಚುನಾವಣೆ ರಂಗೇರಿದೆ. ಅಡ್ಡಮತದಾನದ ಭೀತಿ ಇದೀಗ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ.
ಕಾಂಗ್ರೆಸ್ ನಿಂದ ಅಜಯ್ ಮಕೇನ್, ಜಿ ಸಿ ಚಂದ್ರಶೇಖರ್ ಹಾಗೂ ಸೈಯದ್ ನಾಸೀರ್ ಹುಸೇನ್ 3 ಜನ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ನಾರಾಯಣ ಬಾಂಡಗೆ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾಧಿಕಾರಿ ವಿಶಾಲಾಕ್ಷಿ ಹೇಳಿದ್ದಾರೆ.

ಇಬ್ಬರು ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ ಮಲ್ಲಿಕಾರ್ಜುನ ಕೆಂಗಲಾಳ ಹಾಗೂ ಪದ್ಮರಾಜ್, ನಿಯಮದ ಪ್ರಕಾರ 4 ಸೆಟ್ ನಾಮಪತ್ರ ಹಾಕಬಹುದು, ಕೆಲವರು 3 ಸೆಟ್ ಹಾಕಿದ್ದಾರೆ, ಕೆಲವರು 2 ಸೆಟ್ ಹಾಕಿದ್ದಾರೆ, ಅದರಲ್ಲಿ ಏನು ಸಮಸ್ಯೆ ಇಲ್ಲ ಎಂದರು.
ನಂಬರ್ ಆಪ್ ಪೋಲಿಂಗ್ ಓಟ್ ಡಿವೈಡೆಡ್ ಬೈ ನಂಬರ್ ಆಫ್ ಸೀಟ್ಸ್ ಪ್ರಕಾರ ನಿರ್ಧಾರ ಮಾಡ್ತೀವಿ ಎಂದು ಹೇಳಿದ ಅವರು, 224 ಓಟ್ ಆದ್ರೆ 45.8 ಮತ ಒಬ್ಬ ಅಭ್ಯರ್ಥಿಗೆ ಬೇಕಾಗುತ್ತೆ, ಒಬ್ಬ ಅಭ್ಯರ್ಥಿ ಗೆಲ್ಲಲು 45 ಓಟ್ ಬರಬೇಕು, 20ನೇ ತಾರೀಖು ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆಯಲಿಲ್ಲ ಅಂದ್ರೆ 27 ತಾರೀಖು ಓಟಿಂಗ್ ನಡೆಯುತ್ತೆ ಎಂದರು.

2ನೇ ಪ್ರಾತಿನಿಧ್ಯದ ಓಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಕ್ಷಣಕ್ಕೆ ಆ ಬಗ್ಗೆ ಹೇಳೋಕೆ ಆಗಲ್ಲ, ವ್ಯಾಲಿಡ್ ಓಟ್ ಆಧಾರದ ಮೇಲೆ ನಿರ್ಧಾರ ಆಗುತ್ತೆ, ಓಟಿಂಗ್ ದಿನವೂ ಕೋಟಾ ಚೇಂಜ್ ಆಗಬಹುದು, ಎಲೆಕ್ಷನ್ ಓಟಿಂಗ್ ಆಧಾರದಲ್ಲಿ ಅದಕ್ಕೆ ಫಾರ್ಮುಲಾ ಇರುತ್ತೆ, ಮತದಾನ ನಡೆಯುತ್ತಾ ನಡೆಯುತ್ತಾ ಸೆಕೆಂಡ್ ಫ್ರಿಪ್ರೆನ್ಸ್ ಓಟ್ ಡಿಸೈಡ್ ಆಗುತ್ತೆ ಎಂದರು.

ಅಡ್ಡಮತದಾನದ ಭೀತಿ
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ತಮ್ಮ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇದೀಗ ಚುನಾವಣಾ ಕಣ ರಂಗೇರಿದೆ. ಜೆಡಿಎಸ್ ಗೆ ಐದು ಮತಗಳು ಕಡಿಮೆ ಬೀಳಲಿದೆ. ಇದನ್ನು ಯಾವ ರೀತಿಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಸಂಪಾದನೆ ಮಾಡಲಿವೆ ಎನ್ನುವುದು ಇದೀಗ ಯಕ್ಷ ಪ್ರಶ್ನೆಯಾಗಿದೆ.
ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಅಡ್ಡಮತದಾನದ ಭೀತಿ ಆವರಿಸಿದ್ದು, ಇದನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತದೆಯೋ ಕಾದುನೋಡಬೇಕಾಗಿದೆ.

More News