ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಅವರನ್ನ ಸಿದ್ದರಾಮುಲ್ಲಾ ಖಾನ್ ಅಂತಾರೆ ಅವರು ಈ ದೇಶದವರಲ್ವಾ? ಕರ್ನಾಟಕದವರಲ್ವಾ? ಅವರ ನಾಯಕರಿಗೂ ಅದೇ ರೀತಿಯಲ್ಲಿ ಕರೆಯಬಹುದಾ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ಮುಖಂಡರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್, ರೈತರ ಹೋರಾಟ ಯಾವುದು? ಖಲಿಸ್ತಾನಿ ಹೋರಾಟ ಯಾವುದು? ಅವರನ್ನೇ ಕೇಳ್ಬೇಕು ಎಂದು ವಾಗ್ದಾಳಿ ನಡೆಸಿದರು. ಪ್ರಶ್ನಿಸಿದರು.
ಹತ್ತು ವರ್ಷದಲ್ಲಿ ಪಿಎಂ ಮೋದಿ ಏನು ಮಾಡಿದ್ದಾರೆ ಅನ್ನೋದು ನನಗಂತೂ ಗೊತ್ತಿಲ್ಲ, ರೈತರ ಸಾಲ ಮನ್ನಾ, ಆದಾಯ ದ್ವಿಗುಣ ಮಾಡ್ತೀನಿ ಅಂದಿದ್ರು, ಇದೆಲ್ಲ ಮಾಡಿರುವುದಂತೂ ನನಗೆ ಕಂಡು ಬಂದಿಲ್ಲ, ರೈತರಿಗೆ ಸಂಬಂಧ ಪಟ್ಟ ಕಾರ್ಯಕ್ರಮ, ನದಿಗಳ ಜೋಡಣೆ ಅನ್ನೋ ಆಶ್ವಾಸನೆ ಕೊಟ್ಟಿದ್ರು, ನನಗೆ ಇವೆಲ್ಲ ಕಂಡು ಬಂದಿಲ್ಲ ಎಂದು ಟೀಕಿಸಿದರು.
ಚುನಾವಣೆ ಬಂದಿದ್ದಕ್ಕೆ ಹಿಂದು ಮುಸ್ಲಿಂ ವಿಚಾರ ತರ್ತಾ ಇದ್ದಾರೆ, ಈ ದೇಶದಲ್ಲಿ ಆಜೀಂ ಪ್ರೇಮ್ ಜಿ ಹೆಚ್ಚೆಚ್ಚು ದಾನ ಮಾಡುತ್ತಾರೆ, ಅವರು ಮುಸ್ಲಿಂ ಸಮುದಾಯದವರು, 30 ಬಿಲಿಯನ್ ಡಾಲರ್ ಅವರು ಚಾರಿಟಿಗೆ ನೀಡಿದ್ದಾರೆ, ಚುನಾವಣೆ ಬಂದಾಗ ಹಿಂದು ಮುಸ್ಲಿಂ ಆಗುತ್ತೆ ಅಂತಾ ನಮಗೆ ಗೊತ್ತೇ ಇದೆ, ರಾಮ ಮಂದಿರ, ಹಿಂದು-ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನ್ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.
ನಾವು ಯಾವ ದೇಶಕ್ಕೆ ಹೋಲಿಕೆ ಮಾಡಬೇಕು, ಎಲ್ಲಾ ಸರಕುಗಳು ಚೈನಾದಿಂದ ಬರ್ತಾ ಇದೆ, ಮೇಕ್ ಇನ್ ಇಂಡಿಯಾ ಎಲ್ಲಿದೆ? ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚ ಆಯ್ತು, ಇದರ ಬಗ್ಗೆ ಯಾವ ಬಿಜೆಪಿಯವರಾದ್ರೂ ಮಾತಾಡ್ತಾರಾ ಎಂದು ಪ್ರಶ್ನಿಸಿದರು.
ಸರ್ದಾರ ವಲ್ಲಭಾಯಿ ಪಟೇಲ್ ಪ್ರತಿಮೆ ಕಟ್ಟಿದ್ಯಾರು? ಸರ್ದಾರ್ ವಲ್ಲಭಾಯಿ ಪಟೇಲ್ ರೇ ಆರ್ ಎಸ್ ಎಸ್ ಬ್ಯಾನ್ ಮಾಡಿದ್ದು, ಅವರದ್ದೇ ಪ್ರತಿಮೆ ಮಾಡಿರುವ ಸಿದ್ಧಾಂತ ತಿಳಿತಿಲ್ಲ, ಪ್ರತಿಮೆ ನಂತರ ಅವರ ಹೆಸರು ಎಲ್ಲಾದರೂ ಇದೆಯಾ? ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನ ಸಿದ್ದರಾಮುಲ್ಲಾ ಖಾನ್ ಅಂತಾರೆ, ಅದಕ್ಕೆ ಏನು ಕಾರಣ ಅವರು ಈ ದೇಶದವರಲ್ವಾ? ಕರ್ನಾಟಕದವರಲ್ವಾ?, ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತಾ, ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು, ರಾಜಕೀಯ ಬಟ್ಟೆ ಹಾಕೊಂಡು ಬಂದು ಅದನ್ನೇ ಮಾತಾಡ್ತಾರೆ ಎಂದು ಆರೋಪಿಸಿದರು.
ದೇಶದ ಸಾಲ ಎಷ್ಟಿದೆ ಅಂತಾ ಜೋಶಿ ಹಾಗೂ ಬಿಜೆಪಿ ಅವರಿಗೆ ಕೇಳಿ ಎಂದ ಸಚಿವ ಲಾಡ್ ಟಾಂಗ್ ನೀಡಿದರು.




