ASTRONAUTS FOR GAGAN YAAN MISSION: ನಾಲ್ವರು ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ

ತಿರುವನಂತಪುರ: ಇಸ್ರೋದ ಗಗನ ಯಾನ ಯೋಜನೆಯಡಿಯಲ್ಲಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.
ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೆಸರುಗಳನ್ನು ಪ್ರಕಟಿಸಿದರಲ್ಲದೆ, ಅವರಿಗೆ ರೆಕ್ಕೆಗಳನ್ನು ನೀಡುವ ಮೂಲಕ ಶುಭ ಕೋರಿದರು.

ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಕ್ಯಾಪ್ಟನ್ ಪಿ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್ ಎಸ್ ಶುಕ್ಲಾ ಅವರು ಕಕ್ಷೆಗೆ ಹಾರಲಿರುವ ಗಗನಯಾನಿಗಳಾಗಿದ್ದಾರೆ. ಈ ಗಗನಯಾತ್ರಿಗಳನ್ನು ಭೇಟಿ ಮಾಡುವುದು ಮತ್ತು ಅವರನ್ನು ದೇಶದ ಮುಂದೆ ಪ್ರಸ್ತುತಪಡಿಸಲು ನನಗೆ ಸಂತೋಷವಾಗುತ್ತಿದೆ ಎಂದು ನರೇಂದ್ರ ಮೋದಿ ತಿಳಇಸಿದರು.

ಈ ಗಗನಯಾತ್ರಿಗಳನ್ನು ಇಡೀ ದೇಶದ ಪರವಾಗಿ ಅಭಿನಂದಿಸಲು ಬಯಸುತ್ತೇನೆ. ನೀವು ದೇಶದ ಹೆಮ್ಮೆ ಎಂದು ಹೇಳಿ ಗಗನಯಾತ್ರಿಗಳನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

More News