ಲಂಡನ್ : ಭಾರತೀಯ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ಜನನದ ನಂತರ ಅವರಿಬ್ಬರೂ ಲಂಡನ್ ನಲ್ಲಿಯೇ ಇದ್ದಾರೆ. ಆದರೆ, ಅವರ ಮೊದಲ ಮಗು ವಮಿಕಾ ಎಲ್ಲಿದ್ದಾಳೆ ಎಂಬ ಪ್ರಶ್ನೆ ಅನೇಕರದ್ದು.
ಅದಕ್ಕೆ ಉತ್ತರನೂ ಸಿಕ್ಕಿದೆ. ಆಕೆನೂ ಕೂಡ ಲಂಡನ್ ನಲ್ಲಿ ಇದ್ದಾಳೆ, ವಿರಾಟ್ ಕೊಹ್ಲಿ ಮತ್ತು ಮಗಳು ವಮಿಕಾ ಹೋಟೆಲ್ ನಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ. ಅವರಿಬ್ಬರೂ ಹೋಟೆಲ್ ನಲ್ಲಿರುವಾಗ ಅವರ ಅಭಿಮಾನಿಯೊಬ್ಬರು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಮಾಡಿದ್ದಾರೆ.
ಇದಕ್ಕೆ ಅವರಿಬ್ಬರ ಫ್ಯಾನ್ಸ್ ಬಗೆ ಬಗೆಯ ಕಮೆಂಟ್ ಮಾಡಿದ್ದಾರೆ. ಹಾಗೆಯೇ ಇಬ್ಬರಿಗೂ ಶುಭಾಶಯ ಕೋರಿದ್ದಾರೆ.
ಕಳೆದ ವಾರ ವಿರಾಟ್ ಮತ್ತು ಅನುಷ್ಕಾಗೆ ಗಂಡು ಮಗು ಜನಿಸಿದ್ದನ್ನು ಅವರು ರಿವೀಲ್ ಮಾಡಿದ್ದಾರೆ. ಆ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಫೋಟೋದಲ್ಲಿ ವಮಿಕಾಳ ಮುಖ ಕಾಣಿಸುತ್ತಿಲ್ಲ, ಆದರೆ, ತೆಲೆಗೆ ಹ್ಯಾಟ್ ಧರಿಸಿರುವ ವಿರಾಟ್ ಕಾಣಿಸುತ್ತಾರೆ. ಸೋ ಕ್ಯೂಟ್ ಎಂದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಜಡಿಸಿದ್ದಾರೆ.
ಪ್ರಸ್ತು ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಆಡುತ್ತಿದ್ದರು. ಕೌಟುಂಬಿಕ ಕಾರಣ ನೀಡಿ ಅವರು ಸರಣಿಯಿಂದ ಹಿಂದೆ ಸರಿದಿದ್ದರು. ವಿರಾಟ್ ಇದೀಗ ಮಗಳ ಬಗ್ಗೆ ಕಾಳಜಿ ವಹಿಸಿದ್ದು, ಕುಟುಂಬದೊಂದಿಗೆ ಲಂಡನ್ ನಲ್ಲಿಯೇ ಉಳಿದುಕೊಂಡಿದ್ದಾರೆ.