MORE THAN 30 HUMAN SKULLS FOUND: 30 ಕ್ಕೂ ಹೆಚ್ಚು ಮಾನ ತಲೆಬುರುಡೆ ಪತ್ತೆ: ಬಯಲಾದ ರಹಸ್ಯ

ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ತೋಟದ ಮನೆಯೊಂದರಲ್ಲಿ 30 ಕ್ಕೂ ಹೆಚ್ಚು ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗಿನ ತಲೆಬುರುಡೆಗಳು ಪತ್ತೆಯಾಗಿದ್ದು ಇದೀಗ ಜಿಲ್ಲೆಯಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದೆ.
ಬಿಡದಿ ಬಳಿ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ಈ ಸಂಬಂಧ ಈ ಸಂಬಂಧ ತೋಟದ ಮನೆಯ ಮಾಲೀಕ ಬಲರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಕೊಠಡಜಿಯಲ್ಲಿ ಸಂಗ್ರಹಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ 30ಕ್ಕೂ ಹೆಚ್ಚು ತಲೆಬುರುಡೆಗಳಿಗೆ ನಿತ್ಯವೂ ಬಲರಾಮ ಪೂಜೆ ಮಾಡಿಸುತ್ತಿದ್ದ, ಈ ಮೂಲಕ ಅನೇಕ ವಿರುದ್ಧ ಈತ ಮಾಟ ಮಾಡುತ್ತಿದ್ದ ಎಂದು ಆರೋಪಿಸಿಲಾಗಿದ್ದು, ದೂರು ದಾಖಲಿಸಿ ಬಂಧನಕ್ಕೊಳಗಾದ ಬಲರಾಮನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.
ಎಲ್ಲಾ ತಲೆಬುರುಡೆಗಳನ್ನು ಸ್ಮಶಾನದಿಂದ ತರಲಾಗಿದ್ದು, ಆತನ ಕೆಲವು ಸಲ ಸ್ಮಶಾನದಲ್ಲೂ ಪೂಜೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಮಧ್ಯರಾತ್ರಿ ಸ್ಮಶಾನಕ್ಕೆ ತೆರಳಿ ಪೂಜೆ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.

More News