ಬೆಂಗಳೂರು : ಸಂಸತ್ತಿಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಇವರೆ ಪಾಸ್ ನೀಡಿದ್ದರು, ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹಗೆ ಬಿಜೆಪಿಯಲ್ಲಿ ಟಿಕೇಟ್ ಕೊಟ್ಟಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ವಿರುದ್ದ ಮಾತಾಡಬೇಕು ಅಂತ ಮಾತಾಡುತ್ತಿದ್ದರು, ತಾಲಿಬಾನ್ ಸರ್ಕಾರ ಅಂತ ಸುಮ್ಮನೆ ಟೀಕಿಸುತ್ತಿದ್ದರು, ಅವರನ್ನ ಯಾರು ಒಪ್ಪಿರಲಿಲ್ಲ ಎಂದು ಟಿಕೀಸಿದರು.
ಮೈಸೂರಿನಲ್ಲಿ ಬಿಜೆಪಿ ಯಲ್ಲಿ 20-30 ವರ್ಷ ಕೆಲಸ ಮಾಡಿದ ಹಲವಾರು ನಾಯಕರು ಇದ್ದರು. ಆದರೆ ರಾಜ ಮನೆತನದವರಿಗೆ ಕರೆದು ಟಿಕೆಟ್ ನೀಡಿದ್ದಾರೆ. ಇದರಿಂದ ಬಿಜೆಪಿ ದಿವಾಳಿಯಾಗಿದೆ ಅನ್ನೋದು ಗೊತ್ತಾಗುತ್ತೆ ೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಂತೋಷ್ ಲಾಡ್ ವ್ಯಂಗ್ಯ
ದುರದೃಷ್ಟವಶಾತ್ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ, ಅವ್ರು ನಂಗೆ ಒಳ್ಳೆಯ ಫ್ರೆಂಡ್, ನನಗೂ ಬೇಜಾರಿದೆ, I wish him good luck ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಆದರೂ ಕೂಡ ಪ್ರತಾಪ್ ಸಿಂಹಗೆ ಈ ರೀತಿ ಆಗಬಾರದಿತ್ತು, ಆದ್ರೆ ರಾಜಕಾರಣದಲ್ಲಿ ಈ ರೀತಿ ಅಗುತ್ತಿರುತ್ತೆ, ಸಿದ್ದರಾಮಯ್ಯನವರಿಗೆ ಬೈಯ್ದರೆ ಶಹಬಾಶ್ ಗಿರಿ ಸಿಗುತ್ತೆ ಅಂದುಕೊಂಡಿದ್ರೋ ಏನೋ, ಅವರ ಈ ವಿಚಾರದಲ್ಲಿ ನನಗೆ ತುಂಬಾ ದುಃಖ ಇದೆ ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.
ಪ್ರತಾಪಸಿಂಹಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು
ಚಾಮುಂಡೇಶ್ವರಿ ತಾಯಿ ಇನ್ನೂ ಮುಂದೆ ಪ್ರತಾಪ ಸಿಂಹ ಅವರಿಗೆ ಸದ್ಬುದ್ದಿ ಕೊಡಲಿ, ಸಿಎಂ ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲ ಅಂತಿದ್ರು, ಈಗ ಅವರ ಪರಿಸ್ಥಿತಿ ನೋಡಿದ್ರೆ ಆಯ್ಯೋ ಅನ್ನಿಸುತ್ತೆ ಎಂದು ಸಚಿವ ಭೈರತಿ ಸುರೇಶ್ ವಾಗ್ದಾಳಿ ನಡೆಸಿದರು.
ಅಧಿಕಾರ ಇದ್ದಾಗ ಹಿಗ್ಗಬಾರದು ಅಂತ ಪ್ರತಾಪಸಿಂಹ ನೋಡಿ ಕಲಿಬೇಕು, ಈಶ್ವರಪ್ಪ ಯಾವತ್ತೂ ಸಮುದಾಯದ ಫೈರ್ ಬ್ರಾಂಡ್ ಅಗಿಲ್ಲ, ಜಾತಿ ಜಾತಿಗಳ ನಡುವೆ ಫೈರ್ ಹಾಕುತ್ತಿದ್ರು, ಜಾತಿ ಜಾತಿಗಳ ನಡುವೆ ತಂದು ಹಚ್ಚುವ ಕೆಲಸ ಮಾಡುತ್ತಿದ್ದರು ಎಂದು ಕಿಡಿಕಾರಿದರು.
ತಾಲಿಬಾನ್ ಸರ್ಕಾರ ಅಂದವರಿಗೆ ಅವರ ಪಕ್ಷದಿಂದಲೇ ಸರಿಯಾದ ಪಾಠ
ಭಯೋತ್ಪಾದಕ ಸರ್ಕಾರ,. ತಾಲಿಬಾನ್ ಸರ್ಕಾರ ಎಂದು ಹೇಳಿಕೆ ನೀಡುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ಅವರ ಪಕ್ಷದಿಂದಲೇ ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವ್ಯಂಗ್ಯವಾಡಿದ್ದಾರೆ.
ಪ್ರತಾಪ್ ಸಿಂಹ ಟಿಕೆಟ್ ನಿರಾಕರಣೆ ಬಿಜೆಪಿ ಆಂತರಿಕ ವಿಚಾರ, ಆದರೂ ಕೂಡ ಕಲರ್ ಬಾಂಬ್ ಹಾಕಿದವರಿಗೆ ಸಂಸತ್ ಒಳಗಡೆ ಕರೆದುಕೊಂಡು ಹೋಗಲು ಪಾಸ್ ಕೊಟ್ಟಿದ್ದರು. ಸಮಾಜದಲ್ಲಿ ಒಡಕ್ಕನ್ನ ಸೃಷ್ಟಿ ಮಾಡೋದು ರಾಜಕಾರಣ ಅಲ್ಲ, ಯಾವ ಕಾರಣಕ್ಕೆ ಅವರನ್ನ ಡ್ರಾಪ್ ಮಾಡಿದ್ರು ಬಿಜೆಪಿಯವ್ರು ಸ್ಪಷ್ಟನೆ ಕೊಡಬೇಕಲ್ವಾ ಎಂದು ಪ್ರಶ್ನಿಸಿದರು.
ಸಂಸತ್ ಒಳಗಡೆ ಕಲರ್ ಬಾಂಬ್ ಹಾಕಿರೋರನ್ನ ಕರೆದುಕೊಂಡು ಹೋಗಿದ್ದಕ್ಕಾ, ಮೈಸೂರು ಹೈವೇ ರಸ್ತೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ ಅಂತಾ ಹೇಳಿದ್ರು, ಯಾವ ಕಾರಣಕ್ಕೆ ಅವ್ರಿಗೆ ಟಿಕೆಟ್ ಕೊಟ್ಟಿಲ್ಲ ಅಂತಾ ಹೇಳಬೇಕಲ್ವಾ ಎಂದು ಪ್ರಶ್ನಿಸಿದರು.