ನವದೆಹಲಿ : ಮನುಷ್ಯನ ಜೀವಕ್ಕೆ ಅಪಾಯ ಹಾಗೂ ಅತ್ಯಂತ ಕ್ರೂರ ಎಂದು ಪರಿಗಣಿಸಿರುವ 23 ನಾಯಿ ತಳಿಗಳನ್ನು ವಿದೇಶಗಳಿಂದ ತರಿಸಿಕೊಳ್ಳುವುದು, ಅವುಗಳ ಸಂತಾನೋತ್ಪತ್ತಿ ಮತ್ತು ಅವುಗಳ ಮಾರಾಟವನ್ನು ದೇಶದಲ್ಲಿ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಷ್ಯನ್ ಶಫರ್ಡ್, ಮಾಸ್ಕೋ ಗಾರ್ಡ್ ಡಾಗ್, ವೋಲ್ಫ್ ಡಾಗ್ಸ್, ರೋಡೆಷಿಯನ್ ರಿಜ್ ಬ್ಯಾಕ್, ವಿಟ್ ಬುಲ್ ಟೆರಿಯರ್, ಡೋಗೋ ಅರ್ಜೆಂಟಿನೋ, ಟೋಸಾ ಇನು, ಅಮೆರಿಕನ್ ಸ್ಟಾಫೋರ್ಡ್ ಶೈರ್ ಮುಂತಾದ ನಾಯಿ ತಳಿಗಳನ್ನು ನಿಷೇಧಿಸಲಾಗಿದೆ.

ಪ್ರಾಣಿ ದಯಾ ಸಂಘ ಪೇಟಾ ದ ಮನವಿ ಮೇರೆಗೆ ಕೇಂದ್ರ ಸರ್ಕಾಾರ ಈ ಕ್ರಮ ಕೈಗೊಂಡಿದೆ. ಈ ಕುರಿತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಲ್ಲಾ ರಾಜ್ಯಗಳಿಗೂ ಪತ್ತ ಬರೆದಿದ್ದಾರೆ.




